ರೋಚಕ ಡ್ರಾ ಸಾಧಿಸಿದ ಡೆಲ್ಲಿ
ತೀವ್ರ ಹಣಾಹಣಿ ಯಿಂದ ಕೂಡಿದ್ದ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನೀಡಿದ ಡೆಲ್ಲಿ ಡೈನಮೋಸ್ ಮತ್ತು ಕೇರಳ ಬ್ಲಾಸ್ಟರ್ಸ್ ತಂಡ ಐಎಸ್‍ಎಲ್‍ನ ಪಂದ್ಯದಲ್ಲಿ ರೋಚಕ ಡ್ರಾ ಕಂಡಿದೆ...

ನವದೆಹಲಿ: ತೀವ್ರ ಹಣಾಹಣಿ ಯಿಂದ ಕೂಡಿದ್ದ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ನೀಡಿದ ಡೆಲ್ಲಿ ಡೈನಮೋಸ್ ಮತ್ತು ಕೇರಳ ಬ್ಲಾಸ್ಟರ್ಸ್ ತಂಡ ಐಎಸ್‍ಎಲ್‍ನ ಪಂದ್ಯದಲ್ಲಿ ರೋಚಕ ಡ್ರಾ ಕಂಡಿದೆ.
ಜವಹಾರ್‍ಲಾಲ್ ನೆಹರು ಕ್ರೀಡಾಂಗಣದಲ್ಲಿ ಗುರುವಾರದ ಪಂದ್ಯದಲ್ಲಿ ಡೆಲ್ಲಿ 3-3 ಗೋಲಿನ ಅಂತರದಲ್ಲಿ ಕೇರಳ ವಿರುದ್ಧ ಡ್ರಾ ಸಾಧಿಸಿತು. ಆ ಮೂಲಕ ಡೆಲ್ಲಿ ಡೈನಮೋಸ್ ಇನ್ನು ಒಂದು ಲೀಗ್ ಪಂದ್ಯ ಬಾಕಿ ಉಳಿದಿರುವಂತೆ 22 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇನ್ನು ಕೇರಳ ಬ್ಲಾಸ್ಟರ್ಸ್ ತಂಡ ಡ್ರಾ ಫಲಿತಾಂಶದಿಂದ 1 ಅಂಕ ಪಡೆದು ಅಂಕಪಟ್ಟಿಯಲ್ಲಿ 13 ಅಂಕಗಳೊಂದಿಗೆ ಕೊನೆ ಸ್ಥಾನದಿಂದ ತಪ್ಪಿಸಿಕೊಂಡು 7ನೇ ಸ್ಥಾನದಲ್ಲಿದೆ.
ಡೆಲ್ಲಿ ಡೈನಮೋಸ್ ತಂಡದ ಪರ ಡಾಸ್ ಸ್ಯಾಂಟೋಸ್ 7ನೇ, ನಬಿ 40ನೇ ಮತ್ತು ಸೆಹನಜ್ 90ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಕೇರಳ ಬ್ಲಾಸ್ಟರ್ಸ್ ಪರ ದಗ್ನಲ್ 9ನೇ, ಕೊಯಿಂಬ್ರಾ 30ನೇ ಹಾಗೂ ಜರ್ಮನ್ 39ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಪಂದ್ಯದಲ್ಲಿ ಮೊದಲು ಡೆಲ್ಲಿ ಗೋಲು ದಾಖಲಿಸಿ ಪಂದ್ಯದಲ್ಲಿ ಶುಭಾರಂಭ ಮಾಡಿತಾದರೂ, ನಂತರ ಪಂದ್ಯದ ಕೊನೆಯ ನಿಮಿಷದಲ್ಲಿ ಸೋಲಿನಿಂದ ಪಾರಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


