ಭಾರತೀಯ ಅಥ್ಲೀಟ್‍ಗಳಿಗೆ ಮುಂದುವರಿದ ನಿರಾಸೆ
ಪ್ರಸಕ್ತ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಭಾರತದ ಅಥ್ಲೀಟ್‍ಗಳ ಪ್ರದರ್ಶನ ನೀರಸವಾಗಿದೆ. ಕ್ರೀಡಾಕೂಟದ...

ಬೀಜಿಂಗ್: ಪ್ರಸಕ್ತ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಭಾರತದ ಅಥ್ಲೀಟ್‍ಗಳ ಪ್ರದರ್ಶನ ನೀರಸವಾಗಿದೆ. ಕ್ರೀಡಾಕೂಟದ ಎಂಟನೇ ದಿನವೂ ಭಾರತೀಯ ಅಥ್ಲೀಟ್‍ಗಳು ನಿರಾಸೆ ಮೂಡಿಸಿದ್ದಾರೆ.
ಮಹಿಳೆಯರ 4x400 ರಿಲೆ ಹಾಗೂ 50 ಕಿ.ಮೀ ಮ್ಯಾರಥಾನ್‍ನಲ್ಲಿ ಭಾರತ ಸ್ಪರ್ಧಿಗಳು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಇನ್ನು ಡಿಸ್ಕಸ್ ಥ್ರೋನಲ್ಲೂ ಕರ್ನಾಟಕದ ತಾರಾ ಆಟಗಾರ ವಿಕಾಸ್ ಗೌಡ ಪದಕ ಪಡೆಯುವಲ್ಲಿ ವಿಫಲರಾದರು.
ಶನಿವಾರ ಬರ್ಡ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ನಡೆದ ಪುರುಷರ ಡಿಸ್ಕಸ್ ಥ್ರೋ ವಿಭಾಗದಲ್ಲಿ ವಿಕಾಸ್ ಗೌಡ 62.24 ಮೀ. ದೂರ ಎಸೆಯಲಷ್ಟೇ ಶಕ್ತರಾದ ಕಾರಣ 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇನ್ನು 4ಘಿ400 ಮೀ. ಮಹಿಳೆಯರ ರಿಲೇ ಓಟದಲ್ಲಿ ಭಾರತದ ತಂಡ (3:29.08) 2ನೇ ಹೀಟ್ಸ್‍ನಲ್ಲಿ ಎಂಟನೇ ಸ್ಥಾನ ಪಡೆದಿದ್ದು, ತೀವ್ರ ನಿರಾಸೆಗೆ ಕಾರಣವಾಗಿತ್ತು.
ಇನ್ನು 50 ಕಿ.ಮೀ ಮ್ಯಾರಥಾನ್ ರೇಸ್‍ನಲ್ಲಿ ಭಾರತದ ಸಂದೀಪ್ ಕುಮಾರ್ (3:57:03 ನಿ.) ಹಾಗೂ ಮನೀಷ್ ಸಿಂಗ್ ರಾವತ್ (3:57:11 ನಿ.) ಕ್ರಮವಾಗಿ 26 ಮತ್ತು 27ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


