ಆನಂದ್‍ಗೆ ಅನೀಶ್ ಗಿರಿ ಸವಾಲು
ಗೆಲುವಿನ ಹಾದಿಗೆ ಮರಳಲು ಪರದಾಡುತ್ತಿರುವ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಸಿಂಕ್ವೆಫೀಲ್ಡ್ ಕಪ್...

ಸೆಂಟ್ ಲೂಯಿಸ್: ಗೆಲುವಿನ ಹಾದಿಗೆ ಮರಳಲು ಪರದಾಡುತ್ತಿರುವ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಸಿಂಕ್ವೆಫೀಲ್ಡ್ ಕಪ್ ಟೂರ್ನಿಯ ಆರನೇ ಸುತ್ತಿನಲ್ಲಿ ಹಾಲೆಂಡ್‍ನ ಅನೀಶ್ ಗೀರಿ ವಿರುದ್ಧ ಸೆಣಸಲಿದ್ದಾರೆ.
ಆರಂಭಿಕ ಐದು ಸುತ್ತಿನ ಪಂದ್ಯಗಳ ಪೈಕಿ 2ರಲ್ಲಿ ಸೋಲು ಹಾಗೂ 3ರಲ್ಲಿ ಡ್ರಾ ಸಾಧಿಸುವ ಮೂಲಕ ಟೂರ್ನಿಯಲ್ಲಿ 1.5 ಅಂಕಗಳನ್ನು ಸಂಪಾದಿಸಿರುವ ಆನಂದ್, ಭಾನುವಾರ ನಡೆಯಲಿರುವ ಆರನೇ ಸುತ್ತಿನಲ್ಲಿ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದ್ದಾರೆ.
10 ಆಟಗಾರರ ಈ ಟೂರ್ನಿಯಲ್ಲಿ ಆನಂದ್ ಜಂಟಿ 9ನೇ ಸ್ಥಾನದಲ್ಲಿದ್ದಾರೆ. ಉಳಿದಿರುವ ನಾಲ್ಕು ಸುತ್ತಿನಲ್ಲಿ ಬೃಹತ್ ಗೆಲುವು ದಾಖಲಿಸಿದರಷ್ಟೇ ಆನಂದ್ ಚೇತರಿಕೆ ಕಾಣಲು ಸಾಧ್ಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


