ಧೋನಿ ದಿಢೀರ್ ನಿವೃತ್ತಿಗೆ ವಿರಾಟ್ ಕೊಹ್ಲಿ ಕಾರಣ..?
ಟೀಂ ಇಂಡಿಯಾದ ಮಾಜಿ ಟೆಸ್ಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಿಢೀರ್ ನಿವೃತ್ತಿಗೆ ಪ್ರಸ್ತುತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಾರಣ ಎಂಬ ಶಂಕೆ ಮೂಡುತ್ತಿದೆ...

ನವದೆಹಲಿ: ಟೀಂ ಇಂಡಿಯಾದ ಮಾಜಿ ಟೆಸ್ಟ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಿಢೀರ್ ನಿವೃತ್ತಿಗೆ ಪ್ರಸ್ತುತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಾರಣ ಎಂಬ ಶಂಕೆ ಮೂಡುತ್ತಿದೆ.
ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ದಿಢೀರ್ ನಿವೃತ್ತಿ ಪಡೆದ ಹಿನ್ನಲೆಯಲ್ಲಿ ಸಾಕಷ್ಟು ಊಹಾಪೋಹಗಳು ವ್ಯಕ್ತವಾಗಿದ್ದವು. ಧೋನಿ ಅವರ ಈ ನಿರ್ಧಾರಕ್ಕೆ ಹಲವರನ್ನು ದೂಷಿಸಲಾಗಿತ್ತು. ಇದೀಗ ತಂಡದ ನಿರ್ದೇಶಕ ರವಿಶಾಸ್ತ್ರಿ ಅವರು ಈ ಎಲ್ಲ ಊಹಾಪೋಹಗಳಿಗೆ ತೆರೆಎಳೆಯುವಂತಹ ಹೇಳಿಕೆ ನೀಡಿದ್ದು, ಪರೋಕ್ಷವಾದಿ ಧೋನಿ ನಿವೃತ್ತಿಗೆ ಹಾಲಿ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಾರಣ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರವಿಶಾಸ್ತ್ರಿ ಅವರು, ಆಸ್ಟ್ರೇಲಿಯಾ ಪ್ರವಾಸದ ಸೋಲಿನಿಂದಾಗಿ ಭಾರತ ಧೋನಿ ಸಾಕಷ್ಟು ಬಸವಳಿದಿದ್ದರು. ಇದೇ ಸಮಯದಲ್ಲಿ ಧೋನಿಗೆ ಮೂರೂ ವಿಧದ ಕ್ರಿಕೆಟ್ ನಲ್ಲಿ ತಂಡವನ್ನು ಮುನ್ನಡೆಸುವುದು ಕಷ್ಟಕರವೆನೆಸಿತು. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಾವೂ ತಂಡವನ್ನು ಸಮರ್ಥವಾಗಿ ನಿಭಾಯಿಸಬಲ್ಲೆನು ಎಂಬುದನ್ನು ತೋರಿಸಿಕೊಟ್ಟರು. ಹೀಗಾಗಿ ಇದೇ ಉತ್ತಮ ಸಂದರ್ಭ ಎಂದು ಭಾವಿಸಿದ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದರು ಎಂದು ಹೇಳಿದರು.
ಅಲ್ಲದೆ ಯಾವುದೇ ಒಬ್ಬ ಆಟಗಾರನಿಗೆ ತನ್ನ ನಿವೃತ್ತಿಯ ಕ್ಷಣಗಳು ಕಠಿಣವಾಗಿರುತ್ತದೆ. ಆದರೆ ನನ್ನ ಪ್ರಕಾರ ಇದೊಂದು ಉತ್ತಮ ನಿರ್ಧಾರವಾಗಿತ್ತು. ಧೋನಿ ಮೊದಲೇ ತಮ್ಮ ಮನಸ್ಸಿನಲ್ಲಿ ನಿವೃತ್ತಿ ಬಗ್ಗೆ ಯೋಚಿಸಿದ್ದರು. ಮಾಧ್ಯಮಗಳ ಮೂಲಕ ಕೊಹ್ಲಿ ಅವರನ್ನು ಟೆಸ್ಟ್ ತಂಡದ ನಾಯಕರಾಗಿ ಬಿಂಬಿಸುವುದಕ್ಕಾಗಿಯೇ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ನಿವೃತ್ತಿ ಘೋಷಣೆ ಮಾಡಿದರು. ಆ ಮೂಲಕ ಧೋನಿ ವಿರಾಟ್ ಕೊಹ್ಲಿ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


