ಕ್ರೀಡೆ

ಬಿಂದ್ರಾ ಮನವಿ ಪುರಸ್ಕೃತ

ಹೆಚ್ಚಿನ ತರಬೇತಿಗಾಗಿ ತನಗೆ ಹಣಕಾಸು ನೆರವು ನೀಡಬೇಕೆಂದು ಮನವಿ ಸಲ್ಲಿಸಿದ್ದ ಬೀಜಿಂಗ್ ಒಲಿಂಪಿಕ್ಸ್ ಶೂಟಿಂಗ್ ವಿಜೇತ ಅಭಿನವ್ ಬಿಂದ್ರಾ ಅವರಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅಸ್ತು ಎಂದಿದೆ...

ಬಿಂದ್ರಾ ಮನವಿ ಪುರಸ್ಕೃತ
ಅಭಿನವ್ ಬಿಂದ್ರಾ (ಸಂಗ್ರಹ ಚಿತ್ರ)
Published On :

ನವದೆಹಲಿ: ಹೆಚ್ಚಿನ ತರಬೇತಿಗಾಗಿ ತನಗೆ ಹಣಕಾಸು ನೆರವು ನೀಡಬೇಕೆಂದು ಮನವಿ ಸಲ್ಲಿಸಿದ್ದ ಬೀಜಿಂಗ್ ಒಲಿಂಪಿಕ್ಸ್ ಶೂಟಿಂಗ್ ವಿಜೇತ ಅಭಿನವ್ ಬಿಂದ್ರಾ ಅವರಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅಸ್ತು ಎಂದಿದೆ.

ಅದರಂತೆ ಮುಂದಿನ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗುವಂತೆ ಮುಂದಿನ ತಿಂಗಳು 1ರಿಂದ 11ರವರೆಗೆ ಜರ್ಮನಿಯಲ್ಲಿ ತರಬೇತಿ ಪಡೆಯಲು 5,000 ಯೂರೋಗಳ ಧನಸಹಾಯವನ್ನು ಒದಗಿಸಲಾಗಿದೆ. ``ಯೋಜನಾ ಹಂತದ ಶೇ. 90ರಷ್ಟು ಹಣವನ್ನು ಮುಂಗಡವಾಗಿ ನೀಡಲು ಈಗಾಗಲೇ ಒಪ್ಪಿಗೆ ಸೂಚಿಸಲಾಗಿದೆ. ಖರ್ಚು ವೆಚ್ಚದ ಮೊತ್ತವನ್ನು ಬಿಂದ್ರಾಗೆ ಒದಗಿಸಲಾಗಿರುವ ಟಾರ್ಗೆಟ್ ಒಲಿಂಪಿಕ್ ಫೋಡಿಯಂ (ಟಿಒಪಿ) ಯೋಜನೆಯಡಿ ಒದಗಿಸಲಾಗುವುದು'' ಎಂದು ಕ್ರೀಡಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.