ಕೈಬರಹದ ಮೂಲಕ ಸಂಗಕ್ಕಾರಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ನೀಡಿದ ಕೊಹ್ಲಿ!
ಶ್ರೀಲಂಕಾದ ವಿಶ್ವ ಶ್ರೇಷ್ಠ ಕ್ರಿಕೆಟಿಗ ಕುಮಾರ ಸಂಗಕ್ಕರ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು, ಟೀಂ ಇಂಡಿಯಾದ ಭವಿಷ್ಯದ ನಾಯಕ ವಿರಾಟ್ ಕೊಹ್ಲಿ...

Published On :
ಕೊಲಂಬೋ: ಶ್ರೀಲಂಕಾದ ವಿಶ್ವ ಶ್ರೇಷ್ಠ ಕ್ರಿಕೆಟಿಗ ಕುಮಾರ ಸಂಗಕ್ಕರ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು, ಟೀಂ ಇಂಡಿಯಾದ ಭವಿಷ್ಯದ ನಾಯಕ ವಿರಾಟ್ ಕೊಹ್ಲಿ ಕೈಬರಹದ ಮೂಲಕ ಹೃದಯ ಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.
ಡಿಯರ್ ಕುಮಾರ್, ನಿಮ್ಮ ಪರಿಚಯ ಇರುವುದೇ ನನಗೊಂದು ಸಂತಸದ ವಿಷಯ ಮತ್ತು ಕ್ರಿಕೆಟ್ ನಲ್ಲಿ ನಿಮ್ಮ ಸಾಧನೆ ಬಗ್ಗೆ ಚಕಾರ ಎತ್ತುವಂತಿಲ್ಲ ಎಂದು ಸಂಗಕ್ಕರ ಜೊತೆ ಕೈಕುಲುಕುವ ಫೋಟೋ ಮೇಲೆ ತಮ್ಮ ಆತ್ಮೀಯ ಸಂದೇಶ ಬರೆದಿದ್ದಾರೆ.
ಯುವ ಪೀಳಿಗೆಗೆ ನೀವು ಸ್ಫೂರ್ತಿಯಾಗಿದ್ದೀರ. ನಿಮ್ಮ ಪೀಳಿಗೆಯಲ್ಲೇ ಆಡುತ್ತಿರುವುದು ನನ್ನ ಅದೃಷ್ಟ. ಇವೆಲ್ಲದ್ದಕ್ಕೂ ನಿಮಗೆ ಧನ್ಯವಾದ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ. ಮುಂದಿನ ಜೀವನ ಚೆನ್ನಾಗಿರಲಿ’ ಎಂದು ಕೈಬರಹದ ಮೂಲಕ ಕೊಹ್ಲಿ ವಿದಾಯ ಹೇಳಿದ್ದಾರೆ.
ಕೊಲಂಬೋದ 2ನೇ ಟೆಸ್ಟ್ ಪಂದ್ಯದಲ್ಲಿ ಸಂಗಕ್ಕರ ನಿವೃತ್ತಿ ಘೋಷಿಸಿದರು. ಟೀಮ್ ಇಂಡಿಯಾದ ಆಟಗಾರರು ನಿನ್ನೆ ಗಾರ್ಡ್ ಆಫ್ ಹಾನರ್ ಮೂಲಕ ಸಂಗಕ್ಕರಗೆ ಗೌರವ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


