ಕ್ರೀಡೆ

ಕ್ರಿಕೆಟ್ ಬದುಕಿಗೆ ಕುಮಾರ್ ಸಂಗಕ್ಕಾರ ವಿದಾಯ

ಭಾರತ ವಿರುದ್ಧದ ಟೆಸ್ಟ್ ಸರಣಿ ನಂತರ ಕ್ರಿಕೆಟ್ ಬದುಕಿಗೆ ಪೂರ್ಣ ವಿದಾಯ ಹೇಳಿರುವ ಸಂಗಕ್ಕಾರರ ಕ್ರಿಕೆಟ್ ಬದುಕಿನ ಅಂತ್ಯ ಇಂದಿಗೆ ಕೊನೆಗೊಂಡಿದೆ...

Published On :

ಕೊಲಂಬೋ: ಭಾರತ ವಿರುದ್ಧದ ಟೆಸ್ಟ್ ಸರಣಿ ನಂತರ ಕ್ರಿಕೆಟ್ ಬದುಕಿಗೆ ಪೂರ್ಣ ವಿದಾಯ ಹೇಳಿರುವ ಸಂಗಕ್ಕಾರರ ಕ್ರಿಕೆಟ್ ಬದುಕಿನ ಅಂತ್ಯ ಇಂದಿಗೆ ಕೊನೆಗೊಂಡಿದೆ.

ಮೈದಾನದಲ್ಲಿ ಅದೆಂತಹುದ್ದೇ ವೈರತ್ವವಿರಲಿ ಹಿರಿಯ ಆಟಗಾರನೊಬ್ಬ ನಿವೃತ್ತಿ ಘೋಷಿಸಿದ ಸಂದರ್ಭ ಎದುರಾಳಿ ತಂಡದ ಆಟಗಾರರು ಗೌರವ ಸಲ್ಲಿಸುವುದು ಕ್ರೀಡಾ ಸ್ಫೂರ್ತಿಯನ್ನು ಸಾರುತ್ತದೆ. ಟೀಂ ಇಂಡಿಯಾ ಸಹ ಶ್ರೀಲಂಕಾ ಕ್ರಿಕೆಟಿಗ ಕುಮಾರ ಸಂಗಕ್ಕರಗೆ ಗಾರ್ಡ್ ಆಫ್ ಹಾನರ್ ನೀಡಿ ಕ್ರೀಡಾ ಸ್ಫೂರ್ತಿ ಮೆರೆದಿದೆ.

ನಿನ್ನೆ 2ನೇ ಇನ್ನಿಂಗ್ಸ್ ನಲ್ಲಿ ಸಂಗಕ್ಕರ ಬ್ಯಾಟಿಂಗ್ ನಡೆಸಲು ಮೈದಾನಕ್ಕೆ ಬರುತ್ತಿದ್ದಂತೆ ನಾಯಕ ಕೊಹ್ಲಿ ಸೇರಿ ತಂಡದ ಎಲ್ಲ ಆಟಗಾರರು ಸಾಲಾಗಿ ನಿಂತು ಗೌರವ ಸಲ್ಲಿಸಿದರು.

ಗುರುವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯ ಕುಮಾರ್ ಸಂಗಕ್ಕಾರ ಅವರ ಕೊನೆ ಪಂದ್ಯವಾಗಿತ್ತು. ಟೆಸ್ಟ್ ಆರಂಭಕ್ಕೂ ಮೊದಲೇ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶ್ರೀಲಂಕಾದ ಬ್ಯಾಟಿಂಗ್ ದಂತಕಥೆ ಕುಮಾರ ಸಂಗಕ್ಕಾರ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿತು.

ಟೆಸ್ಟ್ ಕ್ರಿಕೆಟ್ ಬದುಕು
ಟೆಸ್ಟ್ ನಲ್ಲಿ 134 ಪಂದ್ಯಗಳನ್ನಾಡಿರುವ 37ವರ್ಷದ ಎಡಗೈ ಬ್ಯಾಟ್ಸ್ಮನ್ ಸಂಗಕ್ಕಾರ 233 ಇನ್ನಿಂಗ್ಸ್ ನಲ್ಲಿ 57.40ರನ್ ಸರಾಸರಿಯಲ್ಲಿ 12,400 ರನ್ ಗಳಿಸಿದ್ದು, ಟಾಪ್ 10 ರನ್ ಗಳಿಕೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 233 ಇನ್ನಿಂಗ್ಸ್ ಗಳ ಪೈಕಿ ಒಟ್ಟು 38 ಶತಕ, 51 ಅರ್ಧ ಶತಕ ಸಿಡಿಸಿದ್ದು, ಟೆಸ್ಟ್ ಪಂದ್ಯದಲ್ಲಿ 319 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಪ್ರಶಸ್ತಿಗಳು

2012ನೇ ವರ್ಷದ ವಿಸ್ಡೆನ್ ಕ್ರಿಕೆಟರ್
2012ನೇ ವರ್ಷದ ಐಸಿಸಿ ಕ್ರಿಕೆಟರ್
2012ರ ವರ್ಷದ ಟೆಸ್ಟ್ ಆಟಗಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.