ಕ್ರೀಡೆ

ಎರಡನೇ ಇನಿಂಗ್ಸ್: 72 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡ ಶ್ರೀಲಂಕಾ

ಭಾರತ ತಂಡ ನೀಡಿರುವ 413 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಶ್ರೀಲಂಕಾಗೆ ಆರಂಭಿಕ ಆಘಾತ ಎದುರಾಗಿದ್ದು ದಿನಾಂತ್ಯದ ಆಟಕ್ಕೆ 72 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.

ಎರಡನೇ ಇನಿಂಗ್ಸ್: 72 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡ ಶ್ರೀಲಂಕಾ
ಕೊನೆಯ ಟೆಸ್ಟ್ ಪಂದ್ಯವಾಡಿದ ಸಂಗಕ್ಕರಾಗೆ ಗೌರವ ವಿದಾಯ
Published On :

ಕೊಲಂಬೋ: ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ತಂಡ ನೀಡಿರುವ 413 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಶ್ರೀಲಂಕಾಗೆ ಆರಂಭಿಕ ಆಘಾತ ಎದುರಾಗಿದ್ದು ದಿನಾಂತ್ಯದ ಆಟಕ್ಕೆ  72 ರನ್ ಗಳಿಗೆ 2  ವಿಕೆಟ್ ಕಳೆದುಕೊಂಡಿದೆ.

ಆ.24 ರಂದು ಎರಡನೆ ಟೆಸ್ಟ್ ಪಂದ್ಯಾವಳಿಯ ಅಂತಿಮದಿನವಾಗಿದ್ದು ಭಾರತದ ವಿರುದ್ಧ ಗೆಲ್ಲಲು ಶ್ರೀಲಂಕಾಗೆ ಇನ್ನೂ  341 ರನ್ ಗಳನ್ನು ಕಲೆಹಾಕಬೇಕಿದೆ. ಭಾರತದ ಪರ ಆಫ್ ಸ್ಪಿನ್ನರ್ ಗಳು ಶ್ರೀಲಂಕಾಗೆ ಆರಂಭಿಕ ಆಘಾತ ನೀಡಿದ್ದಾರೆ. ಶ್ರೀಲಂಕಾ ಕೇವಲ 8 ರನ್ ಗಳನ್ನು ಪೇರಿಸಿದ್ದಾಗ ಕುಶಾಲ್ ಸಿಲ್ವಾ, ಸ್ಟುವರ್ಟ್ ಬಿನ್ನಿ ಗೆ ಕ್ಯಾಚ್ ನೀಡಿ ಔಟಾದರು. ಇನ್ನು ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡುತ್ತಿರುವ ಸಂಗಕ್ಕಾರ ಪೆವಿಲಿಯನ್ ನತ್ತ ಬಂದಾಗ ಭಾರತದ ಆಟಗಾರರು ಹಾಗೂ ಅಂಪೈರ್ ಗಳು  ಗೌರವ ನೀಡಿದರು.

8 ವಿಕೆಟ್ ಗಳಲ್ಲಿ ಶ್ರೀಲಂಕಾ 314 ರನ್ ಗಳ ಗುರಿ ಮುಟ್ಟಬೇಕಿದೆ. ಶ್ರೀಲಂಕಾ ಈ ಗುರಿಯನ್ನು ದಾಟಿದರೆ ಟೆಸ್ಟ್ ಇತಿಹಾಸದಲ್ಲೇ 3 ನೇ ಅತ್ಯಂತ ಗರಿಷ್ಠ ಮೊತ್ತವನ್ನು ದಾಟಿದ ಹೆಗ್ಗಳಿಕೆಗೆ ಶ್ರೀಲಂಕಾ ಪಾತ್ರವಾಗಲಿದೆ. 12 ವರ್ಷಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ತಂಡ 418 ರನ್ ಗುರಿ ದಾಟಿತ್ತು. 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 414 ರನ್ ಗುರಿ ಮುಟ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.