ಪ್ರೋ ಕಬಡ್ಡಿಯಲ್ಲಿ ನೇಪಾಳಿ ಸೈನಿಕನ ಸ್ಪಿರಿಟ್
ಕಬಡ್ಡಿ ಬಾರ್ಡರ್ ದಾಟಿದ ಕ್ರೀಡೆ. ಈಗ ನಡೆಯುತ್ತಿರುವ ಪ್ರೋ ಕಬಡ್ಡಿಯಲ್ಲಿ ವಿದೇಶಿ ಆಟಗಾರರೂ ಇದ್ದಾರೆ. ಆದರೆ, ನಮ್ಮ ಕಬಡ್ಡಿ ಕೆಲವು ಆರ್ಮಿಗಳ ಸೀಕ್ರೆಟ್ ಕೂಡ ಹೌದು...

ಕಬಡ್ಡಿ ಬಾರ್ಡರ್ ದಾಟಿದ ಕ್ರೀಡೆ. ಈಗ ನಡೆಯುತ್ತಿರುವ ಪ್ರೋ ಕಬಡ್ಡಿಯಲ್ಲಿ ವಿದೇಶಿ ಆಟಗಾರರೂ ಇದ್ದಾರೆ. ಆದರೆ, ನಮ್ಮ ಕಬಡ್ಡಿ ಕೆಲವು ಆರ್ಮಿಗಳ ಸೀಕ್ರೆಟ್ ಕೂಡ ಹೌದು.
ನೇಪಾಳದ ಆರ್ಮಿಯಲ್ಲೂ ಕಬಡ್ಡಿ ಆಡಿಸ್ತಾರೆ ಅನ್ನೋದು ನಿಮ್ಗೆ ಗೊತ್ತಾ? ಈಗಾಗಲೇ ಕಣದಿಂದ ಹೊರಬಿದ್ದ `ದಬಾಂಗ್ ದಿಲ್ಲಿ' ತಂಡದಲ್ಲಿ ನೇಪಾಳಿ ಸೈನಿಕನಿದ್ದಾನೆ, ಜೈ ಬಹದ್ದೂರ್. ಉತ್ತರ ಖಂಡದ ಬಾರ್ಡರ್ ನಲ್ಲಿರುವ ಕಾಂಚನಪುರ ಫಲ್ಸ್ ಬಳಿ ಈತನ ಹಳ್ಳಿಯಂತೆ. ಇಲ್ಲಿನ ಕೆಲವು ಹಳ್ಳಿಗಳು ನೇಪಾಳಕ್ಕೆ ಸೇರಿವೆ. ಜೈ ಬಹದ್ದೂರ್ ನೇಪಾಳ ಆರ್ಮಿ ಸೇರಿ 13 ವರುಷವಾಯ್ತು. ತಂಡದಲ್ಲಿ ಈತನ ದಾಳಿ ತೀರಾ ಅಗ್ರೆಸ್ಸಿವ್.
ಇದಕ್ಕೆ ಕಾರಣವನ್ನು ಜೈ ಬಹದ್ದೂರ್‍ನೇ ಹೇಳುತ್ತಾನೆ; `ನನ್ನ ಸೇನಾ ವೃತ್ತಿಯ ಬಹುತೇಕ ಸಮಯವನ್ನು ಮಾವೋವಾದಿಗಳ ವಿರುದ್ಧ ಹೋರಾಡೋದರಲ್ಲಿಯೇ ಕಳೆದೆ. ದೊಡ್ಡ ಕಾಡಿನಲ್ಲಿ ಅವರನ್ನು ಸದೆಬಡಿಯುವ ಧೈರ್ಯವನ್ನು ನನಗೆ ಕಬಡ್ಡಿ ಹೇಳಿಕೊಟ್ಟಿದೆ. ನಾನು 45 ಗಂಟೆ ನಿರಂತರ ಓಡಿ ಪ್ರಾಣ ಉಳಿಸಿಕೊಂಡಿದ್ದೂ ಉಂಟು. ಈ ಆಟ ನನ್ನ ಬಾಲ್ಯದ ಸ್ಪಿರಿಟ್'. ಜೈ ಬಹದ್ದೂರ್‍ಗೆ ನೇಪಾಳದ ಕಾಡು ದೊಡ್ಡ ಸವಾಲು ಅಲ್ಲವೇ ಅಲ್ವಂತೆ. ಏಕೆಂದರೆ, ಈತ ಆಫ್ರಿಕಾದ ಕಾಂಗೋ ಕಾಡನ್ನು ಕಂಡವನು. 8 ತಿಂಗಳು ವಿಶ್ವಸಂಸ್ಥೆಯ ಶಾಂತಿ ಪಡೆಯಲ್ಲಿ ಕೆಲಸ ಮಾಡಿದ ಅನುಭವವೂ ಬಹದ್ದೂರ್‍ಗೆ ಇದೆ. ನೇಪಾಳದಲ್ಲಿ ಕಬಡ್ಡಿಯು ಭಕ್ತಾಪುರ್, ಡಬುಸಾ ಮತ್ತು ಕಾಂಚನ್ಪುರದಲ್ಲಿ ಜನಪ್ರಿಯ.
ಈತನ ಹಳ್ಳಿಯ ಅನೇಕ ಹುಡುಗರು ರಾಷ್ಟ್ರಮಟ್ಟದ ಕಬಡ್ಡಿ ಪ್ಲೇಯರ್ ಗಳಂತೆ. ಅಂದಹಾಗೆ, ಬಹದ್ದೂರ್ 2015ರ ರಾಷ್ಟ್ರಮಟ್ಟದ ಬೆಸ್ಟ್ ಪ್ಲೇಯರ್. ಪ್ರೋ ಕಬಡ್ಡಿಯಲ್ಲಿ ತಂಡ ಸೋತಿದ್ದಕ್ಕೆ ಬಹದ್ದೂರ್‍ಗೆ ಬೇಜಾರಿದೆ. ಆದರೂ, ಕೋಚ್ ಅರ್ಜುನ್ ಸಿಂಗ್ ನಿಂದ ಕಲಿತ ಅಮೂಲ್ಯ ಟೆಕ್ನಿಕ್ಗಳನ್ನು ತನ್ನ ದೇಶದ ಆಟಗಾರರಿಗೆ, ನೇಪಾಳಿ ಆರ್ಮಿ ತಂಡಕ್ಕೆ ಕಲಿಸುವ ಉತ್ಸಾಹದಲ್ಲಿದ್ದಾನೀತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


