ಕೊಲಂಬೋ ಟೆಸ್ಟ್: ಲಂಕಾ ಮೊದಲ ಇನ್ನಿಂಗ್ಸ್ 306 ಆಲೌಟ್
ಭಾರತ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್ ನಲ್ಲಿ ಅತಿಥೇಯ ಶ್ರೀಲಂಕಾ 306 ರನ್ ಗಳಿಗೆ ಸರ್ವಪತನ ಕಂಡಿದೆ...

ಕೊಲಂಬೋ: ಭಾರತ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್ ನಲ್ಲಿ ಅತಿಥೇಯ ಶ್ರೀಲಂಕಾ 306 ರನ್ ಗಳಿಗೆ ಸರ್ವಪತನ ಕಂಡಿದ್ದು, ಟೀಂ ಇಂಡಿಯಾ 87 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.
ಎರಡನೇ ದಿನದಾಟಕ್ಕೆ 3 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿದ್ದ ಲಂಕಾದ ಮ್ಯಾಥ್ಯೂಸ್(102), ತಿರಿಮನ್ನೆ(62) ಉತ್ತಮ ಜತೆಯಾಟ ಲಂಕಾಗೆ ಚೇತರಿಕೆ ನೀಡಿತು.
ಭೋಜನ ವೇಳೆಗೆ 224ಕ್ಕೆ 3 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಸವಾಲನ್ನು ಸುಲಭವಾಗಿ ದಾಟುವ ಮುನ್ಸೂಚನೆ ನೀಡಿತ್ತು. ಆದರೆ ಬಳಿಕ 231ಕ್ಕೆ 4ನೇ ವಿಕೆಟ್ ಕಳೆದುಕೊಂಡ ತಂಡ, 306 ರನ್ ಗಳಿಸುವಷ್ಟರಲ್ಲಿ ತನ್ನೇಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಲಂಕಾ ಪರ ಚಾಂಡಿಮಲ್ 11, ಮುಬಾರಕ್ 22, ಪ್ರಸಾದ್ 5, ಹೇರಾತ್ 1, ಕೌಶಲ 6 ರನ್ ಗಳಿಸಿದರು.
ಭಾರತದ ಪರ ಅಮಿತ್ ಮಿಶ್ರಾ 4 ವಿಕೆಟ್ ಪಡೆದು ಮಿಂಚಿದರು. ಇಶಾಂತ್ ಶರ್ಮಾ ಹಾಗೂ ಅಶ್ವಿನ್ ತಲಾ 2 ವಿಕೆಟ್ ಪಡೆದರೆ, ಯಾದವ್, ಬಿನ್ನಿ ತಲಾ ಒಂದು ವಿಕೆಟ್ ಉರುಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


