ಕೊಲಂಬೋ ಟೆಸ್ಟ್: ಭಾರತ 393 ರನ್‌ಗಳಿಗೆ ಆಲೌಟ್
ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 393 ರನ್‌ಗಳಿಗೆ ಮುಕ್ತಾಯವಾಗಿದೆ. ಇಂದು ಪಂದ್ಯ ಪುನರಾರಂಭವಾದಾಗ

ಕೊಲಂಬೋ: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ 393 ರನ್‌ಗಳಿಗೆ ಮುಕ್ತಾಯವಾಗಿದೆ. ಇಂದು ಪಂದ್ಯ ಪುನರಾರಂಭವಾದಾಗ ಭಾರತ6 ವಿಕೆಟ್ ಕಳೆದು ಕೊಂಡು 319 ರನ್ ಗಳಿಸಿತ್ತು. ಸ್ಕೋರ್ 321 ರನ್ ಆದಾಗ ಅಶ್ವಿನ್ ಎರಡೇ ಎರಡು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆಮೇಲೆ ಅಮಿತ್ ಮಿಶ್ರಾ ಮತ್ತು ವೃದ್ಧಿಮಾನ್ ಸಾಹಾ ಜತೆಯಾಟದಿಂದ ಭಾರತ ಚೇತರಿಸಿಕೊಂಡಿತು. 56 ರನ್ ಗಳಿಸಿದ ಓಟಾದರೆ, ಮಿಶ್ರಾ 24 ರನ್ ಗಳಿಸಿದ್ದಾರೆ.
ಶತಕ ಬಾರಿಸಿದ ಲೋಕೇಶ್ ರಾಹುಲ್ (108 ರನ್ ), ನಾಯಕ ವಿರಾಟ್ ಕೊಹ್ಲಿ (78), ರೋಹಿತ್ ಶರ್ಮಾ (79) ಮೊದಲಾದವರು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಅದೇ ವೇಳೆ ಶ್ರೀಲಂಕಾದ ರಂಗಣ ಹೆರಾತ್ ನಾಲ್ಕು ವಿಕೆಟ್ ಪಡೆದುಕೊಂಡಿದ್ದಾರೆ. ಧಮ್ಮಿಕ ಪ್ರಸಾದ್, ಏಂಜಲೋ ಮ್ಯಾಥ್ಯೂಸ್, ಚಮೀರ ಮೊದಲಾದವರು ತಲಾ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.
ಪ್ರಥಮ ಟೆಸ್ಟ್ ಪರಾಭವಗೊಂಡಿರುವ ಟೀಂ ಇಂಡಿಯಾಗೆ ಈ ಪಂದ್ಯ ನಿರ್ಣಾಯಕವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


