10 ಸಾವಿರ ಅಡಿ ಎತ್ತರದಿಂದ ಪ್ಯಾರಾಚೂಟ್ ಜಂಪ್ ಮಾಡಿದ ಧೋನಿ
ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆರ್ಮಿ ಟೆರಿಟೋರಿಯಲ್ ತರಬೇತಿಯಲ್ಲಿ ಮೊದಲ ಬಾರಿಗೆ ಪ್ಯಾರಾಚೂಟ್ ಹಾರಾಟವನ್ನು...

ಆಗ್ರಾ: ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆರ್ಮಿ ಟೆರಿಟೋರಿಯಲ್ ತರಬೇತಿಯಲ್ಲಿ ಮೊದಲ ಬಾರಿಗೆ ಪ್ಯಾರಾಚೂಟ್ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಸುಮಾರು ಹತ್ತು ಸಾವಿರ ಅಡಿ ಎತ್ತರದಿಂದ ಧೋನಿ ಜಂಪ್ ಮಾಡಿದ್ದಾರೆ. ಕಳೆದ ಆಗಸ್ಟ್ 6ರಿಂದ ಮಹೇಂದ್ರ ಸಿಂಗ್ ಧೋನಿ ಪ್ಯಾರಾ ಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್(ಪಿಟಿಎಸ್)ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಎನ್ 32 ಏರ್ ಕ್ರಾಫ್ಟ್ ನಿಂದ ಪ್ಯಾರಾಚೂಟ್ ಕಟ್ಟಿಕೊಂಡು ಜಂಪ್ ಮಾಡಿದ ಧೋನಿ ಬಳಿಕ ಆಗ್ರಾ ಸಮೀಪದ ಮಾಲ್ ಪುರಾ ವಲಯದಲ್ಲಿ ಬಂದಿಳಿದಿದ್ದಾರೆ.
ನುರಿತ ಪ್ಯಾರಾ ಜಂಪರ್ ಮೂಲಕ ತರಬೇತಿ ಪಡೆದ ಧೋನಿ ಸುಮಾರು 10 ಸಾವಿರ ಅಡಿ ಎತ್ತರದಿಂದ ಪ್ಯಾರಚೂಟ್ ಮೂಲಕ ಜಂಪ್ ಮಾಡಿದ್ದರು. ಧೋನಿ ಅವರನ್ನು 106 ಪ್ಯಾರಾಚೂಟ್ ರೆಜಿಮೆಂಟ್ ಆಫ್ ದ ಟೆರಿಟೋರಿಯಲ್ ಆರ್ಮಿಯ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಪಡೆದಿದ್ದಾರೆ. ಬಳಿಕ ಪದವಿಗಾಗಿ ತರಬೇತಿ ಪಡೆಯಲು ಧೋನಿ ನಿರ್ಧರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


