ಕ್ರೀಡೆ

ಹುಲಿಗಳ ರಕ್ಷಣೆಗೆ ಸಚಿನ್

ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಈಗ, ಮಹಾರಾಷ್ಟ್ರದ ಹುಲಿಗಳ ರಾಯಭಾರಿಯಾಗಲು ಮುಂದಾಗಿದ್ದು, ಹುಲಿಗಳ ಸಂರಕ್ಷಣೆಯತ್ತ...

ಹುಲಿಗಳ ರಕ್ಷಣೆಗೆ ಸಚಿನ್
ಅಮಿತಾಬ್ ಬಚ್ಚ ನ್ ಜತೆ ಸಚಿನ್ ತೆಂಡೂಲ್ಕರ್ (ಸಂಗ್ರಹ ಚಿತ್ರ)
Published On :

ಮುಂಬೈ: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಈಗ, ಮಹಾರಾಷ್ಟ್ರದ ಹುಲಿಗಳ ರಾಯಭಾರಿಯಾಗಲು ಮುಂದಾಗಿದ್ದು, ಹುಲಿಗಳ ಸಂರಕ್ಷಣೆಯತ್ತ ಆಸಕ್ತಿ ತೋರಿದ್ದಾರೆ. ಕಳೆದ ಗುರುವಾರ ಮಹಾರಾಷ್ಟ್ರ ಅರಣ್ಯ ಸಚಿವರಾದ ಸುಧೀರ್ ಮುಂಗಂಟಿವರ್ ಅವರಿಗೆ ಪತ್ರಬರೆದಿರುವ ಸಚಿನ್, ಹುಲಿಗಳ ಸಂರಕ್ಷಣಾ ಯೋಜನೆಯಲ್ಲಿ ಭಾಗವಹಿಸಲು  ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದರು. ರಾಜ್ಯದಲ್ಲಿ ಹುಲಿಗಳನ್ನು ಸಂರಕ್ಷಿಸುವ ಯೋಜನೆಗೆ ಕೈಜೋಡಿಸುವುದಾಗಿ ತಿಳಿಸಿದ್ದರು.ಇತ್ತೀಚಿಗಷ್ಟೇ ಬಾಲಿವುಡ್ ತಾರೆ ಅಮಿತಾಬ್ ಬಚ್ಚನ್  ಹುಲಿಗಳ ರಾಯಭಾರಿಯಾದ ಮೂರು ದಿನಗಳ ಅವಧಿಯಲ್ಲಿ ಸಚಿನ್ ಸಹ, ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಗಣ್ಯರು ಹುಲಿಗಳ ಸಂರಕ್ಷಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.