ಕ್ರೀಡೆ

ಯೂಕಿ ಭಾಂಬ್ರಿ ರನ್ನರ್ ಅಪ್

ಭಾರತದ ಯುವ ಟೆನಿಸಿಗ ಯೂಕಿ ಭಾಂಬ್ರಿ ಅಪ್ಟೋಸ್ ಚಾಲೆಂಜರ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ...

ಯೂಕಿ  ಭಾಂಬ್ರಿ ರನ್ನರ್ ಅಪ್
ಯೂಕಿ ಭಾಂಬ್ರಿ
Published On :

ಅಪ್ಟೋಸ್ :  ಭಾರತದ ಯುವ  ಟೆನಿಸಿಗ ಯೂಕಿ ಭಾಂಬ್ರಿ  ಅಪ್ಟೋಸ್ ಚಾಲೆಂಜರ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಪ್ರಶಸ್ತಿಗೆ  ತೃಪ್ತಿ ಪಟ್ಟುಕೊಂಡಿದ್ದಾರೆ. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಂಬ್ಡೆನ್ ಜೊತೆಯಲ್ಲಿ  ಕಣಕ್ಕಿಳಿದ್ದದ ಅವರು  ಆಸ್ಟ್ರೇಲಿಯಾದ ಕ್ರಿಸ್ ಗುಸ್ಸಿಯೊನ್  ಹಾಗೂ ನ್ಯೂಜಿಲೆಂಡ್‍ನ ಆರ್ಟೆಮ್  ಸಿಟಾಕ್ಜೋಡಿ 4-6, 6-7 (2) ನೇರಸೆಟ್‍ಗಳ ಅಂತರದಲ್ಲಿ  ಸೋಲು ಕಂಡರು ಸುಮಾರು ಒಂದು ಗಂಟೆ 14 ನಿಮಿಷಗಳಲ್ಲಿ ನಡೆದ ಪಂದ್ಯದಲ್ಲಿ, ಯೂಕಿ ಹಾಗೂ ಎಬ್ಡೆನ್ ಜೋಡಿ, ಆರಂಭದಿಂದಲೂ ಪೇಲವ ಪ್ರದರ್ಶನ ನೀಡಿತು. ಅಲ್ಲದೆ, ಎದುರಾಳಿಗಳನ್ನು ಹತೋಟಿಗೆ
ಪಡೆಯುವ ಎಲ್ಲ ಅವಕಾಶಗಳನ್ನು ಕಳೆದುಕೊಂಡಿತಲ್ಲ ದೆ, ಕೆಲವಾರು ತಪ್ಪುಗಳನ್ನೂ ಎಸಗುವ ಮೂಲಕ ಆಸೀಸ್ -ಕಿವೀಸ್ ಜೋಡಿಗೆ ಅಂಕಗಳನ್ನು ದಾನ ಮಾಡಿತು. ಆದರೂ ಎರಡನೇ ಸೆಟ್ ನಲ್ಲಿ ಪುಟಿದೆದ್ದು ಉತ್ತಮ ಪೈಪೋಟಿ ನೀಡಿತಾದರೂ, ಎದುರಾಳಿಗಳ ಆಕ್ರಮಣಕಾರಿ ಹೋರಾಟದ ಮುಂದೆ ಗೆಲುವು ಸಾಧಿಸಲಾಗಲಿಲ್ಲ. ಇದು ಈ ಬಾರಿಯ ಟೆನಿಸ್ ಋತುವಿನಲ್ಲಿ ಯೂಕಿಭಾಗವಹಿಸಿದ್ಧ ಎರಡನೇ ಡಬಲ್ಸ್ ಫೈನಲ್ ಪಂದ್ಯವಾಗಿತ್ತು. ಇತ್ತೀಚೆಗಷ್ಟೇ, ಸ್ಪೇನ್‍ನ
ಅಡ್ರಿಯನ್ ಮೆನೆಂಡೆಸ್ ಮೆಸಿರಾಸ್ ಜತೆಗೆ  ಕ್ರಾಶಿ ಚಾಲೆಂಜರ್ಸ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಅವರು, ಅಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.