ಕ್ರೀಡೆ

ಯೋಧ ಆದ ಧೋನಿ!

ಭಾರತ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಯೋಧರಾಗಿದ್ದಾರೆ. ಹೌದಾ, ಹೇಗೆ ಅಂತ ಕೇಳ್ತೀರಾ?...

ಯೋಧ ಆದ ಧೋನಿ!
ಯೋಧರ ಸಮವಸ್ತ್ರ ಧರಿಸಿ ಸೆಲ್ಫಿ ತೆಗೆದುಕೊಂಡ ಎಂಎಸ್ ಧೋನಿ
Published On :

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ ಯೋಧರಾಗಿದ್ದಾರೆ. ಹೌದಾ, ಹೇಗೆ ಅಂತ ಕೇಳ್ತೀರಾ? ಅದು ಸ್ವಾತಂತ್ರ್ಯ ದಿನಾಚರಣೆಗೆ.

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭಾರತೀಯ ಸೇನಾಪಡೆಗೆ ಬೆಂಬಲ ನೀಡುವ ಸಲುವಾಗಿ ಟ್ವಿಟ್ಟರ್ ನಲ್ಲಿ ವಿಶೇಷ ಅಭಿಯಾನ ಕೈಗೊಂಡಿದ್ದು, SaluteSelfie ಹ್ಯಾಶ್ ಟ್ಯಾಗ್ ನಲ್ಲಿ ಅನೇಕ ಮಂದಿ ಸೆಲೆಬ್ರಿಟಿಗಳು ಸೇನೆಗೆ ಗೌರವ ಸಲ್ಲಿಸುವ ಸೆಲ್ಫಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಕ್ರಿಕೆಟರ್ ವೀರೇಂದ್ರ ಸೆಹವಾಗ್, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಸೈನಾ ನೆಹ್ವಾಲ್ ಸೇರಿದಂತೆ ಬಾಲಿವುಡ್ ನಟ, ನಟಿಯರು, ಕ್ರೀಡಾಪಟುಗಳು ಈಗಾಗಲೇ ಫೋಟೋ ಹಂಚಿಕೊಂಡಿದ್ದಾರೆ.ಅದಕ್ಕೆ ಹೊಸ ಸೇರ್ಪಡೆ ಧೋನಿ. ಅವರು ಸೇನಾ ಯೋಧರ ಸಮವಸ್ತ್ರದಲ್ಲಿ ಸೆಲ್ಯೂಟ್ ಕೊಡುವ ಫೋಟೋ ಹಾಕಿದ್ದಾರೆ. ಅವರ ಈ ಫೋಟೋವನ್ನೊಮ್ಮೆ ನೋಡಿದರೆ ಯಾವುದೇ ಭಾರತೀಯನಿಗೂ ಸಂಭ್ರಮ, ಅಭಿಮಾನ ಉಕ್ಕಿ ಬರದೆ ಇರದು.

ಎಂಎಸ್ ಧೋನಿ ಅವರಿಗೆ ಭಾರತೀಯ ಸೇನೆಯ ಮೇಲೆ ಹಿಂದಿನಿಂದಲೂ ಅಪಾರವಾದ ಪ್ರೀತಿ, ಅಭಿಮಾನ. ಅವರಿಗೆ ಸೇನೆಯಿಂದ ಲೆಫ್ಟಿನೆಂಟ್ ಕರ್ನಲ್ ಗೌರವ ಕೂಡ ಪ್ರದಾನ ಮಾಡಲಾಗಿತ್ತು. ಅವರೀಗ ಆಗ್ರಾದಲ್ಲಿ ಎರಡು ವಾರಗಳ ಪ್ಯಾರಾ ರೆಜಿಮೆಂಟ್ ತರಬೇತಿ ಪಡೆಯುತ್ತಿದ್ದಾರೆ.ತರಬೇತಿ ಮುಗಿದ ನಂತರ ಅವರು ಪ್ಯಾರಚೂಟ್ ನಿಂದ 5 ಸಲ ಧುಮುಕುವ ಸಾಹಸ ಮಾಡಲಿದ್ದಾರೆ ಎಂದು ರಕ್ಷಣಾ ಇಲಾಖೆ ವಕ್ತಾರ ಸಿತಂಶು ಕಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.