ಕ್ರೀಡೆ

ಶರಪೋವಾ ವಿಶ್ವದ ಶ್ರೀಮಂತ ಕ್ರೀಡಾಳು

ಟೆನಿಸ್ ಅಂಗಣದಲ್ಲಿ ವಿಶ್ವದ ನಂಬರ್ ಒನ್ ನಂಬರ್ ಒನ್ ಆಟಗಾರ್ತಿ, ಅಮೆರಿಕದ ಸೆರೆನಾ ವಿಲಿಯಮ್ಸ್ ಅವರ ಸಮೀಪದ ಪ್ರತಿಸ್ಪರ್ಧಿ ರಷ್ಯಾದ...

ಶರಪೋವಾ ವಿಶ್ವದ ಶ್ರೀಮಂತ ಕ್ರೀಡಾಳು
ಮರಿಯಾ ಶರಪೋವಾ
Published On :

ಲಂಡನ್: ಟೆನಿಸ್ ಅಂಗಣದಲ್ಲಿ ವಿಶ್ವದ ನಂಬರ್ ಒನ್ ನಂಬರ್ ಒನ್ ಆಟಗಾರ್ತಿ, ಅಮೆರಿಕದ ಸೆರೆನಾ ವಿಲಿಯಮ್ಸ್ ಅವರ ಸಮೀಪದ ಪ್ರತಿಸ್ಪರ್ಧಿ ರಷ್ಯಾದ ಮರಿಯಾ ಶರಪೋವಾ, ಸೆರೆನಾ ಅವರನ್ನು ವಿಶ್ವ ಟೆನಿಸ್ ರ್ಯಾಂಕಿಂಗ್ ನಲ್ಲಿ ಹಿಂದಿಕ್ಕುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಫೋರ್ಬ್ಸ್ ಕಂಪನಿ ಬಿಡುಗಡೆಗೊಳಿಸಿರುವ ವಿಶ್ವದ ಅತ್ಯಂತ ಸಿರಿವಂತ ಮಹಿಳಾ ಕ್ರೀಡಾಳುಗಳ ಪಟ್ಟಿಯಲ್ಲಂತೂ ಅವರು ಇದನ್ನು ಸಾಧಿಸಿದ್ದಾರೆ.

ಹೌದು, ಬುಧವಾರ ಬಿಡುಗಡೆಗೊಂಡಿರುವ 2015ರ ಫೋರ್ಬ್ಸ್ ವಿಶ್ವ ಶ್ರೀಮಂತ ಆಟಗಾರ್ತಿಯರ ಟಾಪ್ 10 ಪಟ್ಟಿಯಲ್ಲಿ ಮರಿಯಾ ಶರಪೋವಾ ಮತ್ತೊಮ್ಮೆ ನಂಬರ್ ಒನ್ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷದ ಜೂನ್ 1ರಿಂದ ಈ ವರ್ಷದ ಜೂನ್ 1ರವರೆಗಿನ ಅವಧಿಯಲ್ಲಿ ವಿಶ್ವದ ನಾನಾ ದೇಶಗಳ ಆಟಗಾರ್ತಿಯರು ಒಟ್ಟಾರೆಯಾಗಿಗಳಿಸಿರುವ ಆದಾಯದ ಆಧಾರದ ಮೇರೆಗೆ ಈ ಪಟ್ಟಿಯನ್ನು ತಯಾರಿಸಲಾಗಿದ್ದು, ವಾರ್ಷಿಕವಾಗಿ ಸುಮಾರು ರು.193 ಕೋಟಿ ಆದಾಯ ಗಳಿಸಿರುವ ಶರಪೋವಾ ಮೊದಲ ಸ್ಥಾನ ಪಡೆದಿದ್ದಾರೆ.  ಪಟ್ಟಿಯ ಅಗ್ರಸ್ಥಾನದಲ್ಲಿ ಅವರ ಹೆಸರು ಕಾಣಿಸಿಕೊಂಡಿರುವುದು ಇದು ಸತತ 11ನೇ ಬಾರಿ.

ಸ್ಥಾನ ಆಟಗಾರ್ತಿ ಕ್ರೀಡೆ ಒಟ್ಟು ಆದಾಯ
1. ಮರಿಯಾ ಶರಪೋವಾ ಟೆನಿಸ್ 193 43 150
2. ಸೆರೆನಾ ವಿಲಿಯಮ್ಸ್ ಟೆನಿಸ್ 160 75 84
3. ಕೆರೊಲಿನ್ ವೊಜ್ನಿಯಾಕಿ ಟೆನಿಸ್ 95 23 72
4. ಡ್ಯಾನಿಕಾ ಪ್ಯಾಟ್ರಿಕ್ ರೇಸಿಂಗ್ 90 51 39
5. ಆ್ಯನಾ ಇವಾನೊವಿಚ್ ಟೆನಿಸ್ 54 11 43
6. ಪೆಟ್ರಾ ಕ್ವಿಟೊವಾ ಟೆನಿಸ್ 50 38 12
7. ಸಿಮೊನಾ ಹ್ಯಾಲೆಪ್ ಟೆನಿಸ್ 44 34 10
8. ರೊಂಡಾ ರೌಸಿ ಮಾರ್ಷಲ್ ಆರ್ಟ್ಸ್ 42 19 23
9. ಸ್ಟಾಸಿ ಲೂಯಿಸ್ ಗಾಲ್ಫ್  41 15 26
10. ಅಗ್ನಿಸ್ಕಾ ರಾಡ್ವಾಂಸ್ಕಾ ಟೆನಿಸ್ 39 13 26

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.