ಲಂಕಾ ಟೆಸ್ಟ್: ಶತಕ ಸಿಡಿಸಿದ ಧವನ್, ಕೊಹ್ಲಿ
ಸ್ಫೋಟಕ ಬ್ಯಾಟ್ಸ್ ಮನ್ ಗಳಾದ ಶಿಖರ್ ಧವನ್(118) ಹಾಗೂ ನಾಯಕ ವಿರಾಟ್ ಕೊಹ್ಲಿ(103) ಅವರ ಭರ್ಜರಿ ಶತಕ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ...

Published On :
ಗಾಲೆ: ಸ್ಫೋಟಕ ಬ್ಯಾಟ್ಸ್ ಮನ್ ಗಳಾದ ಶಿಖರ್ ಧವನ್(118) ಹಾಗೂ ನಾಯಕ ವಿರಾಟ್ ಕೊಹ್ಲಿ(103) ಅವರ ಭರ್ಜರಿ ಶತಕ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತ ಮೇಲುಗೈ ಸಾಧಿಸಿದ್ದು, 70 ರನ್ ಮುನ್ನಡೆ ಗಳಿಸಿದೆ.
ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 34 ಓವರ್ಗಳಲ್ಲಿ 2 ವಿಕೆಟ್ಗೆ 128 ರನ್ಗಳಿಂದ ಭಾರತ ಎರಡನೇ ದಿನದಾಟ ಆರಂಭಿಸಿತು. ಉತ್ತಮ ಫಾರ್ಮ್ ನಲ್ಲಿದ್ದ ಧವನ್ ಹಾಗೂ ಕೊಹ್ಲಿ 227 ಜತೆಯಾಟ ನೀಡಿದರು. ಇದರೊಂದಿಗೆ ಭಾರತ ಮೇಲುಗೈ ಸಾಧಿಸಲು ಸಾಧ್ಯವಾಯಿತು.
103 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಕೌಸಲ ಎಸೆದ ಚೆಂಡಿಗೆ ಎಲ್ ಬಿಯಾಗಿ ಫೆವಿಲಿಯನ್ ಸೇರಿದರು. ಕೊಹ್ಲಿ ಬಳಿಕ ಬಂದ ಅಂಜಿಕ್ಯಾ ರಹಾನೆ ಶೂನ್ಯಕ್ಕೆ ಔಟಾದರು.
ಶ್ರೀಲಂಕಾ ಪರ ಕೌಸಲ 2 ವಿಕೆಟ್ ಪಡೆದರೆ, ಪ್ರಸಾದ್, ಮ್ಯಾಥ್ಯೂಸ್ ತಲ 1 ವಿಕೆಟ್ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


