ಗಾಲೆಯಲ್ಲಿ ಗೆಲುವಿನ ಸವಿ ಯಾರಿಗೋ?
ರವಾಸಿ ಭಾರತ ಹಾಗೂ ಆತಿಥೇಯ ಶ್ರೀಲಂಕಾ ನಡುವಣದ ಮೂರು ಟೆಸ್ಟ್ ಪಂದ್ಯ ಸರಣಿಗೆ ಬುಧವಾರ ಚಾಲನೆ ಸಿಗಲಿದ್ದು, 22 ವರ್ಷಗಳ ನಂತರ...

ಗಾಲೆ: ಪ್ರವಾಸಿ ಭಾರತ ಹಾಗೂ ಆತಿಥೇಯ ಶ್ರೀಲಂಕಾ ನಡುವಣದ ಮೂರು ಟೆಸ್ಟ್ ಪಂದ್ಯ ಸರಣಿಗೆ ಬುಧವಾರ ಚಾಲನೆ ಸಿಗಲಿದ್ದು, 22 ವರ್ಷಗಳ ನಂತರ ದ್ವೀಪರಾಷ್ಟ್ರದಲ್ಲಿ ಜಯ ಸಾಧಿಸುವ ಗುರಿಯನ್ನು ವಿರಾಟ್ ಕೊಹ್ಲಿ ಪಡೆ ಹೊತ್ತಿದೆ.
ಇತ್ತ ತವರಿನಲ್ಲಿ ಭಾರತದ ಮೇಲಿನ ತನ್ನ ಪ್ರಭುತ್ವವನ್ನು ಮುಂದುವರೆಸಿಕೊಂಡು ಹೋಗುವ ಛಲ ತೊಟ್ಟಿರುವ ಶ್ರೀಲಂಕಾ, ಭಾರತ ನಡೆಸಲು ಉದ್ದೇಶಿಸಿರುವ ಐವರು ಬೌಲರ್‍ಗಳ ದಾಳಿಗೆ ದಿಟ್ಟ ಉತ್ತರ ನೀಡಲು ಸಂಕಲ್ಪ ತೊಟ್ಟಿದೆ. ಬಾಂಗ್ಲಾದೇಶ ಪ್ರವಾಸದ ನಂತರ ಮೊಟ್ಟಮೊದಲ ವಿದೇಶಿ ಪ್ರವಾಸವನ್ನು ಕೈಗೊಳ್ಳುತ್ತಿರುವ ಯುವ ಭಾರತ ತಂಡಕ್ಕೆ ಅದರಲ್ಲೂ ನಾಯಕ ವಿರಾಟ್ ಕೊಹ್ಲಿಗೆ ಈ ಸರಣಿ ಮಹತ್ವಪೂರ್ಣವೆನಸಿದೆ.
ಅಗ್ರಕ್ರಮಾಂಕದ ಆರು ಮಂದಿ ಆಟಗಾರರು ದ್ವೀಪರಾಷ್ಟ್ರದಲ್ಲಿ ಮೊಟ್ಟಮೊದಲ ಬಾರಿಗೆ ಆಡುತ್ತಿರುವುದು ಒಂದೆಡೆಯಾದರೆ, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ, ಎರಡು ದಶಕಗಳ ನಂತರ ಶ್ರೀಲಂಕಾ ನೆಲದಲ್ಲಿ ಚೊಚ್ಚಲ ಗೆಲುವಿಗಾಗಿ ಎದುರುನೋಡುತ್ತಿದ್ದಾರೆ. ಆದಾಗ್ಯೂ ಇತ್ತೀಚೆಗೆ ಅವರು ಬ್ಯಾಟಿಂಗ್‍ನಲ್ಲಿ ಸ್ಥಿರ ಪ್ರದರ್ಶನ ನೀಡದಿರುವುದು ಸ್ವತಃ ಅವರಲ್ಲೇ ಅಧೈರ್ಯವನ್ನು ಉಂಟುಮಾಡಿದೆ. ಆದಾಗ್ಯೂ ಕೋಚ್ ರವಿಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


