ಸಾನಿಯಾ ಮಿರ್ಜಾಗೆ ರಾಜೀವ್ ಗಾಂಧಿ ಖೇಲ್‍ರತ್ನ ಪ್ರಶಸ್ತಿ
ಇತ್ತೀಚೆಗಷ್ಟೇ ಮುಕ್ತಾಯ ಕಂಡ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿ ಚರಿತ್ರಾರ್ಹ ಸಾಧನೆ ಮಾಡಿದ ಭಾರತದ ನಂ.1 ಟೆನಿಸ್ ತಾರೆ....

ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯ ಕಂಡ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಎನಿಸಿ ಚರಿತ್ರಾರ್ಹ ಸಾಧನೆ ಮಾಡಿದ ಭಾರತದ ನಂ.1 ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಎನಿಸಿರುವ ರಾಜೀವ್ ಗಾಂಧಿ ಖೇಲ್‍ರತ್ನ ನೀಡಲಾಗಿದೆ.
ಕೇಂದ್ರ ಕ್ರೀಡಾ ಸಚಿವಾಲಯ ಕ್ರೀಡಾ ಸ್ಪರ್ಧಿಗಳಿಗೆ ನೀಡಲಾಗುವ ಅತ್ಯುನ್ನತ ಖೇಲ್ ರತ್ನ ಪ್ರಶಸ್ತಿಗೆ ಸಾನಿಯಾ ಮಿರ್ಜಾ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಅಂತಿಮವಾಗಿ ಆಯ್ಕೆ ಸಮಿತಿ ಸಾನಿಯಾ ಅವರನ್ನು ಹೆಸರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
2004ರಲ್ಲಿ ಅರ್ಜುನ ಹಾಗೂ 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಸಾನಿಯಾ, ಕಳೆದ ವರ್ಷ ಇಂಚಾನ್‍ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಡಬಲ್ ಸಾಧನೆ ಮಾಡಿದ್ದರು. ಮಿಶ್ರ ಡಬಲ್ಸ್‍ನಲ್ಲಿ ಸಾಕೇತ್ ಮೈನೇನಿ ಹಾಗೂ ಮಹಿಳಾ ಡಬಲ್ಸ್‍ನಲ್ಲಿ ಪ್ರಾರ್ಥನಾ ತೊಂಬಾರಿ ಜತೆಗೂಡಿ ಬಂಗಾರದ ಪದಕ ಗೆದ್ದಿದ್ದರು. ಮಾತ್ರವಲ್ಲದೆ ಯುಎಸ್ ಓಪನ್ ಮಿಶ್ರ ಡಬಲ್ಸ್‍ನಲ್ಲಿಯೂ ಬ್ರೆಜಿಲ್‍ನ ಬ್ರುನೋ ಸೊರೆಸ್ ಜತೆಗೂಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಸ್ವಿಸ್ ನ ಮಾರ್ಟಿನಾ ಹಂಗೀಸ್ ಜತೆಗೂಡಿ ಸಾನಿಯಾ ಮಿರ್ಜಾ ವಿಂಬಲ್ಡನ್ ಮಹಿಳಾ ಡಬಲ್ಸ್ ನಲ್ಲಿ ಪ್ರಪ್ರಥಮ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


