ಫೈನಲ್‍ಗೆ ಆಸ್ಟ್ರೇಲಿಯಾ
ಮತ್ತೊಮ್ಮೆ ಆಲ್‍ರೌಂಡ್ ಆಟವಾಡಿದ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ `ಎ' ತಂಡವನ್ನು 3 ವಿಕೆಟ್‍ಗಳಿಂದ ಮಣಿಸುವುದರೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವಲ್ಲಿ ಯಶಕಂಡಿದೆ...

ಚೆನ್ನೈ: ಮತ್ತೊಮ್ಮೆ ಆಲ್‍ರೌಂಡ್ ಆಟವಾಡಿದ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ, ಸೋಮವಾರ ನಡೆದ ಪಂದ್ಯದಲ್ಲಿ ಆತಿಥೇಯ ಭಾರತ `ಎ' ತಂಡವನ್ನು 3 ವಿಕೆಟ್‍ಗಳಿಂದ ಮಣಿಸುವುದರೊಂದಿಗೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪುವಲ್ಲಿ ಯಶಕಂಡಿದೆ.
ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ 4ನೇ ಪಂದ್ಯದಲ್ಲಿ ಗೆಲುವಿಗೆ ಉನ್ಮುಕ್ತ್ ಚಾಂದ್ ಸಾರಥ್ಯದ ಭಾರತ ಎ ತಂಡ ನೀಡಿದ್ದ 259 ರನ್ ಗಳಿಗೆ ಉತ್ತರವಾಗಿ ಉಸ್ಮಾನ್ ಖವಾಜಾ ನೇತೃತ್ವದ ಆಸೀಸ್, 48.3 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 262 ರನ್ ಗಳಿಸುವುದರೊಂದಿಗೆ ವಿಯಯಿಯಾಯಿತು. ಆರಂಭಿಕ ಟ್ರಾವಿಸ್ ಹೆಡ್ (45), ಕ್ರಿಸ್ ಲಿನ್ (63), ಕಲಮ್ ಫಗ್ರ್ಯೂಸನ್ (ಅಜೇಯ 45) ಹಾಗೂ ಆ್ಯಡಂ ಝಂಪಾ (54) ಹಾಗೂ 39 ರನ್‍ಗಳಿಗೆ 5 ವಿಕೆಟ್ ಪಡೆದ ಆ್ಯಷ್ಟನ್ ಆಗರ್ ಭಾರತ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮಿಂಚಿದ ಆಗರ್: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ `ಎ' ತಂಡ ಎಡಗೈ ಸ್ಪಿನ್ನರ್ ಆ್ಯಷ್ಟನ್ ಆಗರ್ ನಡೆಸಿದ ಮಾರಕ ದಾಳಿಗೆ ಸಿಲುಕಿ 50 ಓವರ್ ಗಳಲ್ಲಿ 9 ವಿಕೆಟ್ ಗೆ 258 ರನ್ ಗಳಿಸಿತು. ಆರಂಭಿಕ ಮಯಾಂಕ್ ಅಗರ್ವಾಲ್ (61) ಯಶಸ್ವಿ ಅರ್ಥಶತಕ ಪೂರೈಸಿದರೆ, ನಾಯಕ ಉನ್ಮುಕ್ತ್ ಚಾಂದ್ ಕೇವಲ 5 ರನ್ ಗಳಿಗೆ ನಿರುತ್ತರರಾದರು.
ಸಂಕ್ಷಿಪ್ತ ಸ್ಕೋರ್: ಭಾರತ `ಎ': 50 ಓವರ್ ಗಳಲ್ಲಿ 9 ವಿಕೆಟ್‍ಗೆ 258 (ಮಯಾಂಕ್ 61, ಮನೀಶ್ ಪಾಂಡೆ 50, ಕರುಣ್ ನಾಯರ್ 32; ಆ್ಯಷ್ಟನ್ ಆಗರ್ 30ಕ್ಕೆ 5) ಆಸ್ಟ್ರೇಲಿಯಾ ಎ: 48.3 ಓವರ್ ಗಳಲ್ಲಿ 7 ವಿಕೆಟ್ ಗೆ 262 (ಕ್ರಿಸ್ ಲಿನ್ 63, ಆ್ಯಡಂ ಝಂಪಾ 54: ಫರ್ಗ್ಯೂಸನ್ ಅಜೇಯ 45: ಕರಣ್ ಶರ್ಮಾ 45ಕ್ಕೆ 3 ) ಪಂದ್ಯಶ್ರೇಷ್ಠ: ಆ್ಯಷ್ಟನ್ ಆಗರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


