ಕ್ರೀಡೆ

ಬೋಪಣ್ಣಗೆ ನಿರಾಸೆ

ಮೂರನೇ ಶ್ರೇಯಾಂಕಿತ ರೋಹನ್ ಬೋಪಣ್ಣ ಹಾಗೂ ಫ್ಲೋರಿನ್ ಮರ್ಜಿಯಾ ಜೋಡಿಯು ಸಿಟಿ ಓಪನ್ ಟೆನಿಸ್ ಟೂರ್ನಿಯ ಉಪಾಂತ್ಯದ...

ಬೋಪಣ್ಣಗೆ ನಿರಾಸೆ
ರೋಹನ್ ಬೋಪಣ್ಣ
Published On :

ವಾಶಿಂಗ್ಟನ್: ಮೂರನೇ ಶ್ರೇಯಾಂಕಿತ ರೋಹನ್ ಬೋಪಣ್ಣ ಹಾಗೂ ಫ್ಲೋರಿನ್ ಮರ್ಜಿಯಾ ಜೋಡಿಯು ಸಿಟಿ ಓಪನ್ ಟೆನಿಸ್ ಟೂರ್ನಿಯ ಉಪಾಂತ್ಯದ ಪಂದ್ಯದಲ್ಲಿ ಹೊರ ಬಿದ್ದಿದೆ.

ಭಾನುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಈ ಜೋಡಿಯು, ಅಗ್ರಶೇಯಾಂಕಿತ ಜೋಡಿಯಾದ ಬಾಬ್ ಹಾಗೂ ಮೈಕ್ ಬ್ರಯಾನ್ ವಿರುದ್ಧ ಪರಾಭವಗೊಂಡಿತು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಾಕ್ ಓವರ್ ಪಡೆದು ಅಂತಿಮ ನಾಲ್ಕರ ಸುತ್ತಿಗೆ ಪ್ರವೇಶಿಸಿದ್ದ ಬೋಪಣ್ಣ ಜೋಡಿ, ಬ್ರಯಾನ್ ಸಹೋದರರ ವಿರುದ್ಧ 3-6, 4-6 ನೇರ ಸೆಟ್‍ಗಳ ಅಂತರದಲ್ಲಿ ಮುಖಭಂಗ ಅನುಭವಿಸಿತು. ಬ್ರಯಾನ್ ಬ್ರದರ್ಸ್ ತಮ್ಮ ಮುಂದಿನ ಪಂದ್ಯದಲ್ಲಿ ಮಾರ್ಸಿಲೊ ಮೆಲೊ ಮತ್ತು ಇವಾನ್ ಡೊಡಿಗ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.