ಉನ್ಮುಕ್ತ್ ಚಾಂದ್ ಪಡೆಗೆ ಗೆಲ್ಲುವ ಅನಿವಾರ್ಯತೆ
ಈಗಾಗಲೇ ಆರಂಭಗೊಂಡಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ `ಎ' ತಂಡಗಳುಳ್ಳ ತ್ರಿಕೋನ ಸರಣಿಯಲ್ಲಿ ಮೊದಲ ಸೋಲನುಭವಿಸಿ ತತ್ತರಿಸಿರುವ ಭಾರತ `ಎ' ತಂಡಕ್ಕೆ ಭಾನುವಾರ ಎರಡನೇ ಸವಾಲು ಕಾದಿದ್ದು, ದಕ್ಷಿಣ ಆಫ್ರಿಕಾ `ಎ' ತಂಡದ ವಿರುದ್ಧದ ಪಂದ್ಯ...

ಚೆನ್ನೈ: ಈಗಾಗಲೇ ಆರಂಭಗೊಂಡಿರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ `ಎ' ತಂಡಗಳುಳ್ಳ ತ್ರಿಕೋನ ಸರಣಿಯಲ್ಲಿ ಮೊದಲ ಸೋಲನುಭವಿಸಿ ತತ್ತರಿಸಿರುವ ಭಾರತ `ಎ' ತಂಡಕ್ಕೆ ಭಾನುವಾರ ಎರಡನೇ ಸವಾಲು ಕಾದಿದ್ದು, ದಕ್ಷಿಣ ಆಫ್ರಿಕಾ `ಎ' ತಂಡದ ವಿರುದ್ಧದ ಪಂದ್ಯ ಅದಕ್ಕೆ ಮಹತ್ವಪೂರ್ಣವೆನಿಸಿದೆ.
ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಒತ್ತಡಕ್ಕೆ ಉನ್ಮುಕ್ತ್ ಚಾಂದ್ ಬಳಗ ಒಳಗಾಗಿದ್ದರೆ, ಇದೇ ಪರಿಸ್ಥಿತಿ ದ.ಆಫ್ರಿಕಾ ತಂಡಕ್ಕೂ ಇದೆ. ಏಕೆಂದರೆ ಆರಂಭಿಕ ಎರಡು ಪಂದ್ಯಗಳಲ್ಲಿ ಬಲಿಷ್ಟ ಆಸ್ಟ್ರೇಲಿಯಾ `ಎ' ತಂಡ ಜಯಭೇರಿ ಮೊಳಗಿಸಿದೆ. ಅನೌಪಚಾರಿಕ ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ತೋರಿದ ಪ್ರದರ್ಶನವನ್ನೇ ಗಮನಿಸುವುದಾದರೆ, ಧವಳ್ ಕುಲಕರ್ಣಿ ಹಾಗೂ ಸಂದೀಪ್ ಶರ್ಮಾ, ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಹಾಗೂ ಜೊ ಬರ್ನ್ಸ್ ಅವರನ್ನು ಕಟ್ಟಿಹಾಕುವಲ್ಲಿ ಆರಂಭಿsಕ ಯಶಸ್ಸು ಸಂಪಾದಿಸಿದರೂ, ಎಕ್ರಮೇಣ ಇದರಲ್ಲಿ ವಿಫಲರಾಗಿದ್ದಾರೆ.
ಇನ್ನು, ಬ್ಯಾಟಿಂಗ್‍ನಲ್ಲಿ ಉನ್ಮುಕ್ತ್ ಚಾಂದ್ ಹಾಗೂ ಕೇದಾರ್ ಜಾಧವ್ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರೂ, ಮಾಯಾಂಕ್ ಅಗರ್ವಾಲ್, ಮನೀಶ್ ತಿವಾರಿ ಹಾಗೂ ಕರುಣ್ ನಾಯರ್ ಉತ್ತಮ ಮೊತ್ತ ಪೇರಿಸುವಲ್ಲಿ ವಿಫಲವಾಗಿದ್ದು, ಪುಟಿದೆದ್ದು ನಿಲ್ಲಬೇಕಾದ ಸಮಯ ಬಂದೊದಗಿದೆ. ಅತ್ತ, ಹರಿಣಗಳ ಪಡೆ ಅನುಭವಿಗಳಿಂದ ಬಲಿಷ್ಠವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


