ವಿದರ್ಭ ಸ್ಪರ್ಧಾತ್ಮಕ ಮೊತ್ತ
ಆದಿತ್ಯ ಶನ್ವಾರೆ (94) ಹಾಗೂ ಶಲಬ್ ಶ್ರೀವಾತ್ಸವ್ (145) ಅವರುಗಳ ಭರ್ಜರಿ ಜತೆಯಾಟದ ನೆರವಿನೊಂದಿಗೆ ವಿದರ್ಭ ಕ್ರಿಕೆಟ್ ಸಂಸ್ಥೆ ಆತಿಥೇಯ ಕೆಎಸ್‍ಸಿಎ ಇಲೆವೆನ್...

ಬೆಂಗಳೂರು: ಆದಿತ್ಯ ಶನ್ವಾರೆ (94) ಹಾಗೂ ಶಲಬ್ ಶ್ರೀವಾತ್ಸವ್ (145) ಅವರುಗಳ ಭರ್ಜರಿ ಜತೆಯಾಟದ ನೆರವಿನೊಂದಿಗೆ ವಿದರ್ಭ ಕ್ರಿಕೆಟ್ ಸಂಸ್ಥೆ ಆತಿಥೇಯ ಕೆಎಸ್‍ಸಿಎ ಇಲೆವೆನ್ ವಿರುದ್ಧದ ಡಾ. ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ದಿನವೇ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
90 ಓವರ್‍ಗಳಲ್ಲಿ 6 ವಿಕೆಟ್‍ಗೆ 311 ರನ್ ಗಳಿಸಿದ್ದ ವಿದರ್ಭ ಸಮಾಧಾನಕರ ಹೋರಾಟದೊಂದಿಗೆ ದಿನದಾಟಕ್ಕೆ ವಿದಾಯ ಹೇಳಿತು. ಆಟ ನಿಂತಾಗ ರವಿ ಜಾಂಗಿದ್ ಮತ್ತು ಆದಿತ್ಯ ಸರ್ವಾಟೆ ಕ್ರಮವಾಗಿ 30 ಹಾಗೂ 36 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭಕ್ಕೆ ಆದಿತ್ಯ ಹಾಗೂ ಶಲಭ್ ನಡೆಸಿದ ಜಂಟಿ ಹೋರಾಟ ಮಹತ್ವನೀಯವೆನಿಸಿತು. ಈ ಜೋಡಿ 358 ಎಸೆತಗಳಲ್ಲಿ 226 ರನ್ ಕಲೆಹಾಕಿ ಆತಿಥೇಯರನ್ನು ಕಾಡಿತು. ಕೇವಲ 6 ರನ್‍ಗಳಿಂದ ಆದಿತ್ಯ ಶತಕ ವಂಚಿತರಾದರೆ, ಶ್ರೀವಾಸ್ತವ ಭರ್ಜರಿ ಶತಕ ದಾಖಲಿಸಿದರು. 196 ಎಸೆತಗಳನ್ನು ಎದುರಿಸಿದ ಶ್ರೀವಾಸ್ತವ 20 ಬೌಂಡರಿಗಳನ್ನು ಬಾರಿಸಿದರು. ಕೆಎಸ್‍ಸಿಎ ಇಲೆವೆನ್ ಪರ ವೇಗಿ ಎಸ್. ಅರವಿಂದ್ 44ಕ್ಕೆ 2 ವಿಕೆಟ್ ಪಡೆದರು.
ಹರ್ಯಾಣ ಮೇಲುಗೈ: ಇನ್ನು ಆಲೂರು 2ನೇ ಮೈದಾನದಲ್ಲಿ ನಡೆಯುತ್ತಿರುವ ಇದೇ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಡಾ. ಡಿವೈ ಪಾಟೀಲ್ ತಂಡದ ವಿರುದಟಛಿ ಹರ್ಯಾಣ ಕ್ರಿಕೆಟ್ ಸಂಸ್ಥೆ ಮೇಲುಗೈ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಹರ್ಯಾಣ, ಮಂಜೀತ್ ಚೌಧರಿ (50/4) ಹಾಗೂ ಇಕ್ಬಾಲ್ ಅಬ್ದುಲ್ಲಾ (41/2) ನಡೆಸಿದ ಬೌಲಿಂಗ್ ದಾಳಿಗೆ ನಲುಗಿ 62.1 ಓವರ್‍ಗಳಲ್ಲಿ 221ಕ್ಕೆ ಆಲೌಟ್ ಆಯಿತು. ಕುಸಿತ ಕಂಡ ತಂಡಕ್ಕೆ ರಾಹುಲ್ ದಲಾಲ್ (112: 152 ಎಸೆತ, 13 ಬೌಂಡರಿ, 2 ಸಿಕ್ಸರ್) ಅವರ ಶತಕ ನೆರವಾಯಿತು. ಬಳಿಕ ಬ್ಯಾಟಿಂಗ್‍ಗಿಳಿದ ಡಿವೈ ಪಾಟೀಲ್ ತಂಡದ ಬೌಲರ್ ಗಳ ಪರಿಶ್ರಮವನ್ನು ವ್ಯರ್ಥಗೊಳಿಸಿತು. ಜಯಂತ್ ಯಾದವ್ (26/5) ನಡೆಸಿದ ಕರಾರುವಾಕ್ ದಾಳಿಗೆ ಸಿಲುಕಿದ ಅದು 26.5 ಓವರ್‍ಗಳಲ್ಲಿ 104 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆಯ ಭೀತಿಗೆ ಸಿಲುಕಿದೆ. ದಿನದಾಟ ನಿಂತಾಗ ಶುಭಂ ರಂಜಾನೆ 10 ರನ್ ಗಳಿಸಿ ಅಜೇಯರಾಗುಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


