ಆಂಗ್ಲರಿಗೆ ಜಯವರ್ಧನೆ ಬ್ಯಾಟಿಂಗ್ ಸಲಹೆಗಾರ?
ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಅವರನ್ನು ಆಯ್ಕೆ ಮಾಡಲು ಇಸಿಬಿ ಚಿಂತನೆ ನಡೆಸಿದೆ.

ಲಂಡನ್: ಪಾಕಿಸ್ತಾನ ವಿರುದ್ಧದ ಸರಣಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸ ಮಾಡಲಿರುವ ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಅವರನ್ನು ಆಯ್ಕೆ ಮಾಡಲು ಇಸಿಬಿ ಚಿಂತನೆ ನಡೆಸಿದೆ.
ಶ್ರೀಲಂಕಾದ ಖ್ಯಾತ ಆಟಗಾರ ಜಯವರ್ಧನೆ ಜತೆಗೆ ಈ ವಿಚಾರವಾಗಿ ಮಾತುಕತೆ ಆರಂಭಿಸಿದೆ. ಸದ್ಯಕ್ಕೆ ಮಾರ್ಕ್ ರಾಮ್ ಪ್ರಕಾಶ್ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಸಲಹೆಗಾರನಾಗಿದ್ದು, ಜಯವರ್ಧನೆ ಅವರನ್ನು ಅಲ್ಪಾವಧಿಗಾಗಿ ಸಹಾಯಕ ಸಲಹೆಗಾರ ನಾಗಿ ಆಯ್ಕೆ ಮಾಡಲು ಚಿಂತನೆ ನಡೆಸಲಾಗಿದೆ.
ಆರಂಭಿಕ ಹಂತದಲ್ಲಿ ನಾವು ಮಹೇಲಾ ಜತೆಗೆ ಚರ್ಚೆ ನಡೆಸಿದ್ದೇವೆ. ಸ್ವಲ್ಪ ಅವಧಿಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಯುಎಇಯಲ್ಲಿನ ವಾತಾವರಣವನ್ನು ಜಯವರ್ಧನೆ ಹೆಚ್ಚಾಗಿ ತಿಳಿದಿರುವುದರಿಂದ ಇಂಗ್ಲೆಂಡ್ ಬ್ಯಾಟ್ಸ್‍ಮನ್‍ಗಳಿಗೆ ಮಾರ್ಗದರ್ಶನ ನೀಡಲು ಅವರು ಸೂಕ್ತ. ಈವರೆಗೆ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ. 2012ರಲ್ಲಿ ಇಂಗ್ಲೆಂಡ್ ಯುಎಇ ಪ್ರವಾಸ ಕೈಗೊಂಡಿದ್ದಾಗ 0-3 ಅಂತ-ರದಲ್ಲಿ ಸೋಲನುಭವಿಸಿತ್ತು. ಇಂಗ್ಲೆಂಡ್ ತಂಡ 3 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿಗಾಗಿ ಅಕ್ಟೋಬರ್‍ನಲ್ಲಿ ಯುಎಇ ಪ್ರವಾಸ ಕೈಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


