ಬಿಲ್ಲುಗಾರರಿಗೆ ಬಾಬಾ ರಾಮ್‌ದೇವ್ ಯೋಗ ಪಾಠ
ಏಕಾಗ್ರತೆ ಹಾಗೂ ಸ್ಥಿರಚಿತ್ತತೆ ಯಾವುದೇ ಯಶಸ್ಸಿನ ರಹದಾರಿಯಾಗಿದ್ದು ಇದನ್ನು ಮುಂಬರುವರಿಯೋ ಒಲಿಂಪಿಕ್ಸ್ ನಲ್ಲಿ ಯಶಸ್ಸಿನ `ಬತ್ತಳಿಕೆ'ಯನ್ನಾಗಿಸಿಕೊಳ್ಳಲು...

ನವದೆಹಲಿ: ಏಕಾಗ್ರತೆ ಹಾಗೂ ಸ್ಥಿರಚಿತ್ತತೆ ಯಾವುದೇ ಯಶಸ್ಸಿನ ರಹದಾರಿಯಾಗಿದ್ದು ಇದನ್ನು ಮುಂಬರುವರಿಯೋ ಒಲಿಂಪಿಕ್ಸ್ ನಲ್ಲಿ ಯಶಸ್ಸಿನ `ಬತ್ತಳಿಕೆ'ಯನ್ನಾಗಿಸಿಕೊಳ್ಳಲು ಭಾರತದ ಬಿಲ್ಲುಗಾರರು ಯೋಗ ಗುರು ಬಾಬಾ ರಾಮ್ ದೇವ್ ಅವರ ಮೊರೆ ಹೋಗಿದ್ದಾರೆ ಎಂದು `ಜೀ ನ್ಯೂಸ್' ವರದಿ ಮಾಡಿದೆ.
ಇತ್ತೀಚೆಗಷ್ಟೇ ಡೆನ್ಮಾರ್ಕ್ ನಲ್ಲಿ ಮುಕ್ತಾಯ ಕಂಡ ಆರ್ಚರಿ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ ಭಾರತದ ಬಿಲ್ಲುಗಾರರ ಮನೋಬಲವನ್ನು ಇನ್ನಷ್ಟು ಸದೃಢಗೊಳಿಸಲು ಆರ್ಚರಿ ಅಸೋಸಿಯೇಷನ್ ಆಫ್ ಇಂಡಿಯಾ (ಎಎಐ) ನಿರ್ಧರಿಸಿದೆ.
``ಮಾನಸಿಕವಾಗಿ ಸದೃಢಗೊಳ್ಳಲು ನಮ್ಮ ಬಿಲ್ಲುಗಾರರಿಗೆ ಯೋಗ ಗುರು ಬಾಬಾ ರಾಮ್ದೇವ್ ಅವರಿಂದ ವಿಶೇಷ ಯೋಗ ತರಗತಿಗಾಗಿ ಮನವಿ ಮಾಡಿಕೊಳ್ಳಲಾಗಿದೆ. ಸ್ಟಾರ್ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಸಹ ಇದನ್ನು ಬಯಸಿದ್ದರು'' ಎಂದು ಎಎಐ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


