ರಾಣಿ ರಾಂಪಾಲ್ ಸಾಯ್ ಕೋಚ್?
ಹಾಕಿ ಮೈದಾನದಲ್ಲಿನ ತನ್ನ ಪ್ರಚಂಡ ಪ್ರದರ್ಶನದಿಂದ ಗಮನ ಸೆಳೆದಿರುವ ಭಾರತ ವನಿತಾ ಹಾಕಿ ತಂಡದ ಮುಂಪಡೆ ಆಟಗಾರ್ತಿ ರಾಣಿ ರಾಂಪಾಲ್...

ನವದೆಹಲಿ: ಹಾಕಿ ಮೈದಾನದಲ್ಲಿನ ತನ್ನ ಪ್ರಚಂಡ ಪ್ರದರ್ಶನದಿಂದ ಗಮನ ಸೆಳೆದಿರುವ ಭಾರತ ವನಿತಾ ಹಾಕಿ ತಂಡದ ಮುಂಪಡೆ ಆಟಗಾರ್ತಿ ರಾಣಿ ರಾಂಪಾಲ್
ಸದ್ಯದಲ್ಲೇ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್ )ದ ಸಹಾಯಕ ಕೋಚ್ ಆಗಿ ನಿಯುಕ್ತಿಯಾಗುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ. ಹರ್ಯಾಣ ಮೂಲದ ಈ ಪ್ರತಿಭಾನ್ವಿತ ಆಟಗಾರ್ತಿ ರಾಣಿ 2010ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾಗ ಕೇವಲ ಹದಿನೈದರ ಹರಯವಷ್ಟೆ. ಆದರೆ ಇದಕ್ಕೂ ಮುಂಚಿನ ವರ್ಷದಲ್ಲಿ ರಷ್ಯಾದ ಕಾಜನ್‍ನಲ್ಲಿ ನಡೆದಿದ್ದ ಚಾಂಪಿಯನ್ಸ್ ಚಾಲೆಂಜ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರಶಸ್ತಿ ಬಿಡುಗಡೆಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರ ಫಲವಾಗಿ ಆಕೆಯನ್ನು ಆ ಟೂರ್ನಿಯಲ್ಲಿ `ಟೂರ್ನಿಯ ಯುವ ಆಟಗಾರ್ತಿ' ಎಂದು ಗೌರವಿಸಲಾಗಿತ್ತು. ಇದರ ಜತೆಗೆ 2010ರಲ್ಲಿ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ ನೀಡಿದ್ದ `ಮಹಿಳೆಯರ ಯುವ ಆಟಗಾರ್ತಿ' ಪ್ರಶಸ್ತಿಯೂ ರಾಣಿಯದ್ದಾಗಿತ್ತು. ಏತನ್ಮಧ್ಯೆ 2013ರ ಜೂನಿಯರ್ ವಿಶ್ವಕಪ್‍ನಲ್ಲಿಯೂ ಅಮೋಘ ನಿರ್ವಹಣೆ ನೀಡಿದ್ದ ರಾಣಿ ರಾಂಪಾಲ್ ಭಾರತ ಕಂಚಿನ ಪದಕ ಗಳಿಸಲು ನೆರವಾಗಿದ್ದರು. ``ನಿಸ್ಸಂಶಯವಾಗಿ ರಾಣಿ ರಾಂಪಾಲ್ ಪ್ರಸ್ತುತ ದಿನಗಳಲ್ಲಿ ಒಬ್ಬ ಪ್ರಮುಖ ಹಾಕಿ ಆಟಗಾರ್ತಿ. ಬೆಲ್ಜಿಯಂನ ಆ್ಯಂಟ್ವೆರ್ಪ್‍ನಲ್ಲಿ ಇತ್ತೀಚೆಗಷ್ಟೇ ನಡೆದ ವಿಶ್ವ ಲೀಗ್ ಸೆಮಿ ಫೈನಲ್‍ನಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಆಕೆಯ ಒಟ್ಟಾರೆ ವೃತ್ತಿಬದುಕಿನ ಸಾಧನೆಗಳನ್ನು ಗುರುತಿಸಿದ ಮೇಲೆ ಮುಂದಿನ ಯುವ ಆಟಗಾರ್ತಿಯರಿಗೆ ಸ್ಪೂರ್ತಿಯಾಗಬಹುದು ಎಂಬು ದನ್ನು ಮನಗಂಡು ನೇಮಕಾತಿ ನಿಯಮಾವಳಿಯ ವಿನಾಯಿತಿಯಡಿ ಆಕೆಗೆ ಸಾಯ್ ನ ಕೋಚ್ ಆಗಿ
ಕಾರ್ಯನಿರ್ವಹಿಸುವಂತೆ ಆಹ್ವಾನ ನೀಡಲಾಗಿದೆ'' ಎಂದು ಸಾಯ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


