ದಕ್ಷಿಣ ಡೇರ್: ಸಂದೀಪ್ ಶರ್ಮಾ, ಕರಣ್ ಮುನ್ನಡೆ
ದಕ್ಷಿಣ ಭಾರತದ ಖ್ಯಾತ ಮೋಟಾರ್ ಸ್ಪರ್ಧೆಯಾಗಿರುವ ದಕ್ಷಿಣ್ ಡೇರ್‌ನ ಮೊದಲ ದಿನ ಸಂದೀಪ್ ಶರ್ಮಾ ಮತ್ತು ಕರಣ್ ಆರ್ಯ ಮುನ್ನಡೆ...

ಚಿತ್ರದುರ್ಗ: ದಕ್ಷಿಣ ಭಾರತದ ಖ್ಯಾತ ಮೋಟಾರ್ ಸ್ಪರ್ಧೆಯಾಗಿರುವ ದಕ್ಷಿಣ್ ಡೇರ್‌ನ ಮೊದಲ ದಿನ ಸಂದೀಪ್ ಶರ್ಮಾ ಮತ್ತು ಕರಣ್ ಆರ್ಯ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಆರಂಭವಾದ ಸ್ಪರ್ಧೆಯಲ್ಲಿ 170 ಮೋಟಾರ್ ಸ್ಪರ್ಧಿಗಳು ಭಾಗವಹಿಸಿದ್ದು, ಮೊದಲ ದಿನ ಎರಡು ಹಂತದಲ್ಲಿ ನಡೆಯಿತು. ಏರಿಳಿತದ ರಸ್ತೆಯಲ್ಲಿ ಜೋರಾಗಿ ಗಾಳಿ ಬೀಸುತ್ತಿದ್ದರೂ, ಕಲ್ಲು ಬಂಡೆಗಳನ್ನು ದಾಟಿ ಸಾಗುತ್ತಿದ್ದ ಸ್ಪರ್ಧಿಗಳ ಉತ್ಸಾಹ ರೋಚಕವಾಗಿತ್ತು.
ಅಲ್ಟಿಮೇಟ್ ಕಾರ್ ವಿಭಾಗದಲ್ಲಿ 75 ಕಿ.ಮೀ ದೂರದ ರೇಸ್ ನಡೆದಿದ್ದು, ಹಾಲಿ ಚಾಂಪಿಯನ್ ಸಂದೀಪ್ ಶರ್ಮಾ ಮತ್ತು ಅವರ ನೇವಿಗೇಟರ್ ಕರಣ್ ಆರ್ಯ 1: 33: 49 ಗಂಟೆಗಳಲ್ಲಿ ಕ್ರಮಿಸಿ ಸಮರ್ಥ್ ಯಾದವ್ ಮತ್ತು ಗೌರವ್ 1: 36: 65 ಗಂಟೆಗಳಲ್ಲಿ ಕ್ರಮಿಸಿ ದ್ವಿತೀಯ ಸ್ಥಾನ ಪಡೆದರು. ಹರ್ಪ್ರೀತ್ ಬವಾ ಮತ್ತು ಪರ್ಮಿಂದರ್ ಠಾಕೂರ್ 1: 39:14 ಗಂಟೆಗಳಲ್ಲಿ ಕ್ರಮಿಸಿ ತೃತೀಯ ಸ್ಥಾನ ಪಡೆದರು.
ಇನ್ನು ಅಲ್ಟಿಮೇಟ್ ಬೈಕ್ ವಿಭಾಗದಲ್ಲಿ ಅರವಿಂದ್ ಕೆ.ಪಿ.1:28:44 ಗಂಟೆಗಳಲ್ಲಿ ಕ್ರಮಿಸಿ ಮುನ್ನಡೆ ಸಾಧಿಸಿದರು. ನಂತರದ ಸ್ಥಾನದಲ್ಲಿ ನಟರಾಜ್ ಮತ್ತು ವಿಶ್ವಾಸ್ ಎಸ್.ಡಿ.ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು.
ಎಂಡ್ಯೂ ರೆನ್ಸ್ ಕಾರ್ ವಿಭಾಗದಲ್ಲಿ ಒಟ್ಟು 370 ಕಿ.ಮೀ ಕ್ರಮಿಸಲಿದ್ದು, ಟಿಎಸ್‌ಡಿ ಮಾದರಿಯಲ್ಲಿ ಸ್ಪರ್ಧಿಗಳನ್ನು ನಿರ್ಧರಿಸಲಾಗುವುದು. ದಿಲೀಪ್ ಜೈನ್ ಹಾಗೂ ಚಂದು ಶೇಖರ್ 40ಸೆ.ಗಳ ಅಂತರದೊಂದಿಗೆ ರೇಸ್‌ನಲ್ಲಿ ಮುನ್ನಡೆ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


