ಪಾಕ್‍ಗೆ ರೋಚಕ ಜಯ
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳಾದ ಶಾಹಿದ್ ಅಫ್ರಿದಿ ಹಾಗೂ ಅನ್ವರ್ ಅಲಿಯವರ ಸಮಯೋಚಿತ ಆಟದಿಂದಾಗಿ, ಪ್ರವಾಸಿ ಪಾಕಿಸ್ತಾನ ತಂಡ, ಶ್ರೀಲಂಕಾ ವಿರುದ್ಧದ 2ನೇ ಟಿ 20 ಪಂದ್ಯದಲ್ಲಿ ರೋಚಕ 1 ವಿಕೆಟ್ ಜಯ ಸಾಧಿಸಿತು...

ಕೊಲಂಬೊ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳಾದ ಶಾಹಿದ್ ಅಫ್ರಿದಿ ಹಾಗೂ ಅನ್ವರ್ ಅಲಿಯವರ ಸಮಯೋಚಿತ ಆಟದಿಂದಾಗಿ, ಪ್ರವಾಸಿ ಪಾಕಿಸ್ತಾನ ತಂಡ, ಶ್ರೀಲಂಕಾ ವಿರುದ್ಧದ 2ನೇ ಟಿ 20 ಪಂದ್ಯದಲ್ಲಿ ರೋಚಕ 1 ವಿಕೆಟ್ ಜಯ ಸಾಧಿಸಿತು.
ಈ ಜಯದೊಂದಿಗೆ ಪಾಕಿಸ್ತಾನ, ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 20 ಅಂತರದ ಗೆಲುವು ಪಡೆದಿದೆ. ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ, 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 19.2 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ, ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗೆ ಇಳಿದ ಶ್ರೀಲಂಕಾ, ಪಾಕಿಸ್ತಾನ ಬೌಲಿಂಗ್ ದಾಳಿಗೆ ತುತ್ತಾಗಿ, ಆರಂಭಿಕರನ್ನು ಬೇಗನೇ ಕಳೆದುಕೊಂಡಿತು. ಆದರೂ, ಮಧ್ಯಮ ಕ್ರಮಾಂಕದ ಶೆಹಾನ್ ಜಯಸೂರ್ಯ ಹಾಗೂ ಚಮರಾ ಕಪುಗೆದರಾ ಅವರ ಉಪಯುಕ್ತ ಆಟದಿಂದ 172 ರನ್ಗಳ ದೊಡ್ಡ ಮೊತ್ತ ಪೇರಿಸಿತು.
ಆನಂತರ ಬ್ಯಾಟಿಂಗ್‍ಗೆ ಇಳಿದ ಪಾಕಿಸ್ತಾನ ಸಹ ಲಂಕಾ ದ ಬೌಲಿಂಗ್ ದಾಳಿಗೆ ಕಂಗೆಟ್ಟಿತು. ಆರಂಭಿಕರಾದ ಮುಕ್ತಾರ್ ಅಹ್ಮದ್ ಹಾಗೂ ಅಹ್ಮದ್ ಶಹಜಾದ್ ಇಬ್ಬರೂ ಒಂದಂಕಿ ರನ್‍ಗೆ ಪೆವಿಲಿಯನ್‍ಗೆ ಮರಳಿದರು. ಆನಂತರವೂ, ಮಹಮ್ಮದ್ ಹಫೀಸ್, ಶೋಯಬ್ ಮಲಿಕ್, ಉಮರ್ ಅಕ್ಮಲ್ ಹಾಗೂ ಮಹಮ್ಮದ್ ರಿಜ್ವಾನ್ ಎಲ್ಲರೂ ಬೇಗನೇ ಪೆವಿಲಿಯನ್ ಗೆ ಮರಳಿದ್ದು ಪಾಕಿಸ್ತಾನಕ್ಕೆ ಸೋಲಿನ ಭೀತಿ ತಂದಿತ್ತು. ಒಂದು ಹಂತದಲ್ಲಿ, 107 ರನ್ ಮೊತ್ತಕ್ಕೆ 7 ವಿಕೆಟ್ ಕಳೆ ದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ನೆರವಾದ ಅಫ್ರಿದಿ (45 ರನ್, 22 ಎಸೆತ, 1 ಬೌಂಡರಿ, 4 ಸಿಕ್ಸರ್) ಹಾಗೂ ಅನ್ವರ್ ಅಲಿ (46 ರನ್, 17 ಎಸೆತ, 3 ಬೌಂಡರಿ, 4 ಸಿಕ್ಸರ್) ತಂಡಕ್ಕೆ ಗೆಲವು ತಂದಿತ್ತರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 20 ಓವರ್ಗಳಲ್ಲಿ 172ಕ್ಕೆ
7 (ಕಪುಗೇದರಾ 48, ಜಯಸೂರ್ಯ 40; ಶೋಯಬ್ ಮಲಿಕ್ 16ಕ್ಕೆ 2); ಪಾಕಿಸ್ತಾನ
ಅನ್ವರ್ ಅಲಿ 46, ಶಾಹಿದ್ ಅಫ್ರಿದಿ 45; ಫರ್ನಾಂಡೊ 33ಕ್ಕೆ 2. ಪಂದ್ಯಶ್ರೇಷ್ಠ: ಅನ್ವರ್ ಅಲಿ; ಸರಣಿ ಶ್ರೇಷ್ಠ: ಶೋಯಬ್ ಮಲಿಕ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


