ಐಪಿಎಲ್‌ನಲ್ಲಿ ಸರ್ಫರಾಜ್ ಎಂಬ ಲಿಟ್ಲ್ ಸ್ಟಾರ್
ನಿನ್ನೆ (ಬುಧವಾರ) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಹೊಸತೊಂದು ತಾರೋದಯವಾಗಿದೆ. ರಾಯಲ್ ...

ಬೆಂಗಳೂರು: ನಿನ್ನೆ (ಬುಧವಾರ) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಹೊಸತೊಂದು ತಾರೋದಯವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸರ್ಫರಾಜ್ ನೌಶಾದ್ ಖಾನ್ ಎಂಬ 17ರ ಹರೆಯದ ಕ್ರಿಕೆಟಿಗ ನಿನ್ನೆ ಎಲ್ಲರನ್ನೂ ಬೆರಗುಗೊಳಿಸಿದ್ದ!
ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 21 ಎಸೆತಗಳಲ್ಲಿ 6 ಬೌಂಡರಿಗಳು ಮತ್ತು 1 ಸಿಕ್ಸರ್ ಹೊಡೆದು ಸರ್ಫರಾಜ್ 45 ರನ್ ಗಳಿಸಿದ್ದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿತ್ತು.
ಜಾವೇದ್ ಮಿಯಾಂದಾದ್, ಅರವಿಂದ ಡಿಸಿಲ್ವಾ ಅವರಷ್ಟೇ ಪ್ರತಿಭೆ ಸರ್ಫರಾಜ್‌ನಲ್ಲಿದೆ ಎಂಬುದು ಕ್ರಿಕೆಟ್ ತಜ್ಞರ ಅಂಬೋಣ. ಈ ನಡುವೆ ಆಟ ಮುಗಿಸಿ ಫೀಲ್ಡ್‌ನಿಂದ ಹೊರಗೆ ಹೋಗುತ್ತಿರುವ ಸರ್ಫರಾಜ್ ಖಾನ್‌ಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ನಮಸ್ಕಾರ ಮಾಡುತ್ತಿರುವ ಫೋಟೋ ಅಂತರ್ಜಾಲದಲ್ಲಿ ಸಂಚಲವನ್ನೂ ಸೃಷ್ಟಿಸಿದೆ.

ಸರ್ಫರಾಜ್‌ನ ಕ್ರಿಕೆಟ್ ಜೀವನ ಆರಂಭವಾಗಿದ್ದು ಮುಂಬೈನಲ್ಲಿ. 2009ರಲ್ಲಿ ಹಾರಿಸ್ ಶೀಲ್ಡ್ ಇಂಟರ್ ಸ್ಕೂಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್‌ನ ದಾಖಲೆ ಮುರಿಯುವ ಮೂಲಕ ಸರ್ಫರಾಜ್ ಸುದ್ದಿಯಾಗಿದ್ದನು. ತನ್ನ ಮೊದಲನೇ ಪಂದ್ಯದಲ್ಲಿ 421 ಎಸೆತಗಳಲ್ಲಿ 56 ಬೌಂಡರಿ ಮತ್ತು 12 ಸಿಕ್ಸರ್ ಗಳ ಸಹಾಯದಿಂದ 439 ರನ್ ಗಳಿಸಿದ ಹೆಗ್ಗಳಿಗೆ ಸರ್ಫರಾಜ್‌ನದ್ದು. ಆವಾಗ ಈತನ ವಯಸ್ಸು ಕೇವಲ 12!
ಅಪ್ಪ ನೌಶಾದ್ ಖಾನ್ ಗರಡಿಯಲ್ಲೇ ಈತ ಆಫ್ ಸ್ಪಿನ್ ಬೌಲಿಂಗ್ ಕೂಡಾ ಕಲಿಯುತ್ತಿದ್ದಾನೆ.
ಕಳೆದ ವರ್ಷ ದುಬೈನಲ್ಲಿ ನಡೆದ ಅಂಡರ್ 19 ವಿಶ್ವಕಪ್ ತಂಡದಲ್ಲಿ ಸರ್ಫರಾಜ್ ಖಾನ್ ಸ್ಥಾನ ಕಂಡುಕೊಂಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಈತ ಮುಂಬೈ ತಂಡದಲ್ಲಿ ಬಂಗಾಳದ ವಿರುದ್ಧ ಆಟವಾಡಿದ್ದ. ಆದರೆ ಈಡೆನ್ ಗಾರ್ಡನ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಒಂದು ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು.
ಸರ್ಫರಾಜ್ ಎಂಬ ಈ ಕ್ರಿಕೆಟಿಗನನ್ನು 50 ಲಕ್ಷ ಕೊಟ್ಟು ಆರ್‌ಸಿಬಿ ಖರೀದಿಸಿತ್ತು. ಇಷ್ಟು ಕಡಿಮೆ ವಯಸ್ಸಿನ ಆಟಗಾರನೊಬ್ಬ ಐಪಿಎಲ್ ಆಡುತ್ತಿರುವುದು ಐಪಿಎಲ್‌ನ ಇತಿಹಾಸದಲ್ಲಿ ಇದೇ ಮೊದಲು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


