ಭಾರತದ ಕೈತಪ್ಪಿದ ಒಲಿಂಪಿಕ್ಸ್ ಆತಿಥ್ಯ
ಕೇಂದ್ರ ಸರ್ಕಾರದ ನಿರಾಸಕ್ತಿಯಿಂದಾಗಿ 2024ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಅವಕಾಶ ಭಾರತದ ಕೈತಪ್ಪಿದೆ. ಬಿಡ್‍ಗೆ ಸಂಬಂಧಿಸಿದಂತೆ, ಸೋಮವಾರ ಸಂಜೆ ನಡೆದ

ನವದೆಹಲಿ: ಕೇಂದ್ರ ಸರ್ಕಾರದ ನಿರಾಸಕ್ತಿಯಿಂದಾಗಿ 2024ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಅವಕಾಶ ಭಾರತದ ಕೈತಪ್ಪಿದೆ. ಬಿಡ್‍ಗೆ ಸಂಬಂಧಿಸಿದಂತೆ, ಸೋಮವಾರ ಸಂಜೆ ನಡೆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಅಧ್ಯಕ್ಷ ಥಾಮಸ್ ಬಾಕ್ ಅವರ ಮಾತುಕತೆ ನಂತರ, ಬಾಕ್ ಈ ವಿಚಾರ ತಿಳಿಸಿದರು.
ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ), ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ)ಯನ್ನು ಕೋರಿತ್ತು. ಅದರಂತೆ, ಐಒಎ ನಿಯೋಗ ಭಾರತಕ್ಕೆ ಸೋಮವಾರ ಆಗಮಿಸಿತ್ತು. ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರ ನೇತೃತ್ವದ ನಿಯೋಗ ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು.
ಆದರೆ, ಭೇಟಿಯ ವೇಳೆ ಮೋದಿಯವರು, ಪಂದ್ಯಾವಳಿಯ ಆತಿಥ್ಯದ ಬಗ್ಗೆ ಸ್ಪಷ್ಟವಾಗಿ ನಕಾರ ವ್ಯಕ್ತಪಡಿಸಿದ್ದರಿಂದ, ಭಾರತಕ್ಕೆ ಆತಿಥ್ಯದ ಅವಕಾಶ ತಪ್ಪಿಹೋಗಿದೆ. ಭೇಟಿಯ ನಂತರ ಸುದ್ದಿಗಾರರಿಗೆ ಬಾಕ್ ಈ ವಿಷಯ ತಿಳಿಸಿದರು.
2024ರ ಒಲಿಂಪಿಕ್ಸ್ ಕ್ರೀಡಾಕೂಟದ ಆತಿಥ್ಯವನ್ನು ಭಾರತಕ್ಕೆ ನೀಡಬಹುದು ಎಂಬ ಪ್ರಸ್ತಾವನೆ ಐಒಎಯಿಂದ ಕೇಳಿದಾಗ, ನಾನು ಅಚ್ಚರಿಗೊಂಡಿದ್ದೆ ಭಾರತಕ್ಕಿನ್ನೂ ಆ ಶಕ್ತಿ ಬರಲು ಇನ್ನೂ ಸಾಕಷ್ಟು ದಿನಗಳು ಬೇಕಿವೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


