ಕ್ರೀಡೆ

ಚಾಲೆಂಜ್ ಸೋತ ರಾಯಲ್ಸ್

ಸತತ ಮೂರು ಪಂದ್ಯಗಳ ಸೋಲಿನ ಕಹಿ ನಂತರ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿಜಯಲಕ್ಷ್ಮಿ ಒಲಿದಿದ್ದಾಳೆ...

ಚಾಲೆಂಜ್ ಸೋತ ರಾಯಲ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
Published On :

ಅಹ್ಮದಾಬಾದ್: ಸತತ ಮೂರು ಪಂದ್ಯಗಳ ಸೋಲಿನ ಕಹಿ ನಂತರ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿಜಯಲಕ್ಷ್ಮಿ  ಒಲಿದಿದ್ದಾಳೆ. ಆ ಮೂಲಕ ಆರ್‍ಸಿಬಿ ತಂಡ ಎಂಟನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ತನ್ನ ಐದನೇ ಪಂದ್ಯದಲ್ಲಿ ಎರಡನೇ ಗೆಲವು ದಾಖಲಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 9 ವಿಕೆಟ್‍ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು
ಸದೆಬಡಿಯಿತು. ಗೆಲ್ಲಲು 131 ರನ್‍ಗಳ ಸಾಧಾರಣ ಗುರಿ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಇನ್ನೂ 23 ಎಸೆತಗಳು ಉಳಿದಿರುವಂತೆಯೇ  1 ವಿಕೆಟ್ ಒಪ್ಪಿಸಿ ಗೆಲವಿನ ನಗೆ
ಬೀರಿತು. ಗುರಿ ಅಲ್ಪವಾಗಿದ್ದರಿಂದ ಆರ್‍ಸಿಬಿ ಬ್ಯಾಟ್ಸ್ ಮನ್‍ಗಳು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ನಿರಾಳವಾಗಿ ಬ್ಯಾಟ್ ಮಾಡಿ ಅರ್ಹ ಗೆಲವು
ತಮ್ಮದಾಗಿಸಿಕೊಂಡರು. ಆರಂಭಿಕ ಗೇಯ್ಲ್ ಬೇಗನೆ ನಿರ್ಗಮಿಸಿದರೂ ಸಹ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮುರಿಯದ ಎರಡನೇ ವಿಕೆಟ್
ಜೊತೆಯಾ ಟದಲ್ಲಿ 11.4 ಓವರುಗಳಲ್ಲಿ 98 ರನ್ ಸೇರಿಸಿ ತಂಡಕ್ಕೆ ಸರಳ ಗೆಲವು ಖಚಿತಪಡಿಸಿದರು. ಅಬ್ಬರಿಸಿದ ಕೊಹ್ಲಿ 46 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್‍ಗಳಿದ್ದ 62
ರನ್ ಹಾಗೂ ಡಿವಿಲಿಯರ್ಸ್ 34 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡ 47 ರನ್‍ಗಳಿಸಿ ಅಜೇಯರಾಗುಳಿದರು. ರಾಜಸ್ಥಾನ ರಾಯಲ್ಸ್ ಬೌಲರ್‍ಗಳು ಆರ್‍ಸಿಬಿಯ
ಅಗ್ರಕ್ರಮಾಂಕದ ಬ್ಯಾಟ್ಸ್‍ಮನ್‍ಗಳನ್ನು ಕಟ್ಟಿಹಾಕಲು ಎಷ್ಟೇ ಪ್ರಯತ್ನ ನಡೆಸಿದರೂ ಫಲ ಪಡೆಯಲಾಗದೇ ನಿರಾಸೆಗೊಂಡರು.
ರಾಜಸ್ಥಾನಕ್ಕೆ ಆರ್‍ಸಿಬಿ ಕಡಿವಾಣ: ಟಾಸ್ ಗೆದ್ದ ಆರ್ ಸಿಬಿ ತಂಡ ಎದುರಾಳಿಯನ್ನು ಮೊದಲು ಬ್ಯಾಟಿಂಗ್‍ಗೆ ಇಳಿಸಿ ಬೇಗನೆ ನಿಯಂತ್ರಿಸುವ ತನ್ನ ಯೋ ಜನೆಯಲ್ಲಿ
ಸಫಲವಾಯಿತು. ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಜಸ್ಥಾನಕ್ಕೆ 9 ವಿಕೆಟ್ ನಷ್ಟಕ್ಕೆ 130 ರನ್‍ಗಳಿಸಲಷ್ಟೇಸಾಧ್ಯವಾಯಿತು.
ಮಧ್ಯಮ ಕ್ರಮಾಂ ಕದಲ್ಲಿ ಸ್ಟೀವನ್ ಸ್ಮಿತ್ 28 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸೇರಿದಂತೆ 31 ರನ್‍ಗಳಿಸಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತವಾಯಿತು.
ಆರಂಬಿsಕರಾದ ಅಜಿಂಕ್ಯ ರಹಾನೆ ಮತ್ತು ನಾಯಕ ಶೇನ್ ವ್ಯಾಟ್ಸನ್ ಹಾಗೂ ಕೆಳಕ್ರಮಾಂಕದಲ್ಲಿ ಸ್ಟುವರ್ಟ್ ಬಿನ್ನಿ ಹೋರಾಡುವ ಪ್ರಯತ್ನ ನಡೆಸಿದರಾದರೂ ವೈಯಕ್ತಿಕವಾಗಿ ಬೃಹತ್ ಮೊತ್ತ ಪೇರಿಸಲು ವಿಫಲರಾದರು. ಆರ್‍ಸಿಬಿ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಮಿಚೆಲ್ ಸ್ಟಾರ್ಕ್ 3 ಹಾಗೂ ಹರ್ಷಲ್ ಪಟೇಲ್ ಮತ್ತು
ಯುಜವೇಂದ್ರ ಚಹಾಲ್ ತಲಾ 2 ವಿಕೆಟ್ ಪಡೆದರು. ಈ ಮಧ್ಯೆ ಚಹಾಲ್ ತಮ್ಮ ಎರಡನೇ ಓವರಿನ ಮೊದಲ ಎಸೆತದಲ್ಲಿ ಗಾಯಗೊಂಡು ಬೌಲಿಂಗ್ ಅನ್ನು ಅರ್ಧಕ್ಕೆ
ನಿಲ್ಲಿಸಿ ಹೊರನಡೆದರು. ಕರುಣ್ ನಾಯರ್ ನೇರವಾಗಿ ತಮ್ಮತ್ತ ಬಾರಿಸಿದ ಚೆಂಡನ್ನು ಚಹಾಲ್ ಕ್ಯಾಚ್ ಆಗಿ ಪರಿವರ್ತಿಸಲು ಯತ್ನಿಸಿದರು. ಆದರೆ, ವೇಗವಾಗಿ ಬಂದ ಚೆಂಡು ಅವರ ಕಿರು ಬೆರಳಿಗೆ ಬಲವಾದ ಗಾಯ ಉಂಟುಮಾಡಿದ್ದರಿಂದ ಕ್ಯಾಚ್ ತಪ್ಪಿತು. ತೀವ್ರ ಗಾಯಕ್ಕೆ ಒಳಗಾದ ಚಹಾಲ್‍ಗೆ ಮುಂದೆ ಬೌಲ್ ಮಾಡಲಾಗಲಿಲ್ಲ. ಚಹಾಲ್ ಸ್ಥಾನದಲ್ಲಿ
ಬದರೀನಾಥ್ ಕ್ಷೇತ್ರರಕ್ಷಣೆಗೆ ಆಗಮಿಸಿದರು. ಬಳಿಕ ನಾಯಕ ವಿರಾಟ್ ಕೊಹ್ಲಿ, ಉಳಿದ 5 ಎಸೆತಗಳನ್ನು ಪ್ರಯೋ ಗಿಸಿ ಓವರ್ ಪೂರ್ಣಗೊಳಿಸಿದರು. ಮೂರು
ಓವರುಗಳ ನಂತರ ಪುನಃ ಚಹಾಲ್ ದಾಳಿಗೆ ಹಿಂತಿರುಗಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.