ಕ್ರೀಡೆ

ಡೆಲ್ಲಿ ದಾಳಿಗೆ ಮುಂಬೈ ತತ್ತರ

ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲವು ಕಾಣುವ ಮೂಲಕ ಸತತ ನಾಲ್ಕು ಸೋಲುಗಳ ಸರಪಳಿಯಿಂದ...

ಡೆಲ್ಲಿ ದಾಳಿಗೆ ಮುಂಬೈ ತತ್ತರ
ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್
Published On :

ನವದೆಹಲಿ: ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲವು ಕಾಣುವ ಮೂಲಕ ಸತತ ನಾಲ್ಕು ಸೋಲುಗಳ ಸರಪಳಿಯಿಂದ ಹೊರಬಂದಿದ್ದ ಮುಂಬೈ ತಂಡ ಪುನಃ `ಪರಾಭವದ ಕಬಂಧ ಬಾಹು'ವಿನಲ್ಲಿ ಬಂಧಿತವಾಗಿದೆ.

ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಖಾಮುಖಿಯಾಗಿದ್ದ ರೋಹಿತ್ ಪಡೆ, 37 ರನ್‍ಗಳ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ, 20 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು. ಶ್ರೇಯಸ್ ಭರ್ಜರಿ ಆಟ: ಟಾಸ್ ಗೆದ್ದಿದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಡೆಲ್ಲಿ ತಂಡವನ್ನು ಬ್ಯಾಟಿಂಗ್‍ಗೆ ಇಳಿಸಿದರು. ಆದರೆ, ಕೇವಲ 2 ರನ್ ಮೊತ್ತಕ್ಕೇ ಆರಂಭಿಕ ಮಾಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡ ಡೆಲ್ಲಿ ಸಂಕಷ್ಟಕ್ಕೆ ಸಿಲುಕಿತು. ಆದರೆ, ನಂತರ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ನಾಯಕ ಡುಮಿನಿ 2ನೇ ವಿಕೆಟ್‍ಗೆ 154 ರನ್‍ಗಳ ಜೊತೆಯಾಟವಾಡಿ, ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. ಈ ಜೊತೆಯಾಟ ತಂಡ ಉತ್ತಮ ಮೊತ್ತ ಪೇರಿಸಲು ನೆರವಾಯಿತು.

ಆದರೆ, ಇನಿಂಗ್ಸ್‍ನ 17ನೇ ಓವರ್‍ನಲ್ಲಿ 83 ರನ್ (56 ಎಸೆತ,7 ಬೌಂಡರಿ, 5 ಸಿಕ್ಸರ್) ಗಳಿಸಿದ್ದ ಅಯ್ಯರ್ ಔಟಾಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಅವರ ನಂತರ ಬಂದ ಆ್ಯಂಜೆಲೊ ಮ್ಯಾಥ್ಯೂಸ್ ಎಂಟು ಎಸೆತಗಳಲ್ಲಿ 17 ರನ್ (8 ಎಸೆತ, 3 ಬೌಂಡರಿ) ಗಳಿಸಿ ಔಟಾದರು. ಅವರ ವಿಕೆಟ್ ಉರುಳಿದ್ದು 18ನೇ ಓವರ್‍ನಲ್ಲಿ. ಮ್ಯಾಥ್ಯೂಸ್ ನಂತರ ಬಂದ ಯುವರಾಜ್ ಸಿಂಗ್, ಕೇವಲ 2 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಕೊನೆಯವರೆಗೂ ಅಜೇಯರಾಗುಳಿದ ಡುಮಿನಿ ತಂಡದ ಮೊತ್ತ 190 ರನ್ ಗಡಿ ಮುಟ್ಟಿಸಿದರು.

ಮುಂಬೈ ತಂಡದ ಮೆಕ್ಲೆನಾಘನ್ ಅವರು ದುಬಾರಿಯಾಗಿ ಪರಿಣಮಿಸಿದರೂ 2 ವಿಕೆಟ್ ಪಡೆದರು. ಇನ್ನು, ಮಾಲಿಂಗ ಹಾಗೂ ಬುರ್ಮಾ ತಲಾ ಒಂದು ವಿಕೆಟ್ ಗಳಿಸಿದರು. ಡೆಲ್ಲಿ ನೀಡಿದ್ದ ಸ್ಪರ್ಧಾತ್ಮಕ ಮೊತ್ತದ ಬೆನ್ನಟ್ಟಿದ ಮುಂಬೈ ಉತ್ತಮ ಆರಂಭ ಪಡೆಯಿತಾದರೂ, ಡೆಲ್ಲಿ ತಂಡದ ಬೌಲರ್‍ಗಳ ದಾಳಿಗೆ ತುತ್ತಾಯಿತು. ಆರಂಬಿsಕ ಜೋಡಿದ ಮಯಾಂಕ್ ಸಿಮನ್ಸ್
ಹಾಗೂ ಪಾರ್ಥೀವ್ ಪಟೇಲ್, ಕೇವಲ 35 ರನ್ ಸೇರಿಸುವಷ್ಟರಲ್ಲಿ ಬೇರ್ಪಟ್ಟರು. ಇದಾದ ನಂತರ, ನಿಗದಿತ ಅಂತರದಲ್ಲಿ ಮುಂಬೈ ವಿಕೆಟ್ ಚೆಲ್ಲುತ್ತಾ ಸಾಗಿತು. ಅಬ್ಬರದ ಆಟಕ್ಕೆ ಹೆಸರುವಾಸಿಯಾದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಹೆಚ್ಚು ಆಡಲಿಲ್ಲ. 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸೇರಿದಂತೆ 30 ರನ್ ಗಳಿಸಿದರಾದರೂ ತಂಡದ ಗೆಲವಿಗೆ ಅತ್ಯಗತ್ಯವಾಗಿದ್ದ ಗಟ್ಟಿಯಾಗಿ ಬೇರೂರಿ ನಿಂತು ಅವರು ಆಡಲಿಲ್ಲ.

ಮಿಂಚಿದ ಇಮ್ರಾನ್ ತಾಹಿರ್
ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳನ್ನು ಕಾಡಿದ ಇಮ್ರಾನ್ ತಾಹಿರ್ ಡೆಲ್ಲಿ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಮಾಡಿದ ಇನಿಂಗ್ಸ್ ನ 16ನೇ ಓವರ್ ಮುಂಬೈ ತಂಡದ ಸೋಲಿನ ಹಣೆಬರಹ ಬರೆಯಿತು. ಆ ಓವರ್‍ನ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬಲಿ ಪಡೆದ ತಾಹಿರ್, ಮೂರನೇ ಎಸೆತದಲ್ಲಿ ಅಪಾಯಕಾರಿ ಎಂದೆನಿಸಿದ್ದ ಆಂಬಟಿ ರಾಯುಡು (30 ರನ್, 22 ಎಸೆತ, 3 ಬೌಂಡರಿ, 1 ಸಿಕ್ಸರ್) ವಿಕೆಟ್ ಉರುಳಿಸಿದರು. ಇನ್ನು, 4ನೇ ಎಸೆತದಲ್ಲಿ ಮೆಕ್ಲೆನಾಘನ್ ಅವರನ್ನೂ ಪೆವಿಲಿಯನ್‍ಗೆ ಅಟ್ಟುವ ಮೂಲಕ ಡೆಲ್ಲಿ ತಂಡದ ಜಯದ ಹಾದಿಯಲ್ಲಿದ್ದ ಎಲ್ಲಾ ಅಡೆತಡೆಗಳನ್ನೂ ನಿವಾರಿಸಿದರು. ಅಂತಿಮವಾಗಿ, ಮುಂಬೈ 20 ಓವರ್‍ಗಳಲ್ಲಿ 153 ರನ್ ಮಾತ್ರ ಗಳಿಸಲು ಶಕ್ತವಾಯಿತು. ಡೆಲ್ಲಿ ತಂಡದ ಅಮಿತ್ ಮಿಶ್ರಾ, ಆ್ಯಂಜೆಲೊ ಮ್ಯಾಥ್ಯೂಸ್ ತಲಾ 2 ವಿಕೆಟ್ ಪಡೆದರೆ, ಕಾಲ್ಟರ್ -ನೀಲ್ ಹಾಗೂ ಮುತ್ತುಸ್ವಾಮಿ ತಲಾ 1 ವಿಕೆಟ್ ಗಳಿಸಿದರು.

ಸ್ಕೋರ್ ವಿವರ
ಡೆಲ್ಲಿ ಡೇರ್‍ಡೆವಿಲ್ಸ್
20 ಓವರ್‍ಗಳಲ್ಲಿ 190ಕ್ಕೆ 4

ಮಾಯಂಕ್ ಅಗರ್ವಾಲ್ ಸಿ ರಾಯುಡು ಬಿ ಮೆಕ್ಲನಾಘನ್ 1, ಶ್ರೇಯಸ್ ಅಯ್ಯರ್ ಬಿ ಮಾಲಿಂಗ 83, ಜೆಪಿ ಡುಮಿನಿ ಅಜೇಯ 78, ಆ್ಯಂಜೆಲೊ ಮ್ಯಾಥ್ಯೂಸ್ ಸಿ ಪಟೇಲ್ ಬಿ ಮೆಕ್ಲೆನಾಘನ್ 17, ಯುವರಾಜ್ ಸಿಂಗ್ ಸಿ ಪೊಲಾರ್ಡ್ ಬಿ ಬುರ್ಮಾ 2, ಕೇದಾರ್ ಜಾಧವ್ ಅಜೇಯ 1. ಇತರೆ (ಲೆಗ್‍ಬೈ 1, ವೈಡ್ 6, ನೊಬಾಲ್ 1) 8.
ವಿಕೆಟ್ ಪತನ: 1--2, 2--156, 3--174, 4--187.
ಬೌಲಿಂಗ್ ವಿವರ: ಮೆಕ್ಲೆನಾಘನ್4-0-38-2, ಮಾಲಿಂಗ 4-0-23-1, ಬುರ್ಮಾ 4-0-55-1, ಹರ್ಭಜನ್ ಸಿಂಗ್ 4-0-34-0, ಪಾಂಡ್ಯ 2-0-14-0, ಪೊಲಾರ್ಡ್ 2-0-25-0.
ಮುಂಬೈ ಇಂಡಿಯನ್ಸ್ -20 ಓವರ್‍ಗಳಲ್ಲಿ 153ಕ್ಕೆ 9
ಲೆಂಡ್ಲ್ ಸಿಮನ್ಸ್ ಸಿ ಡುಮಿನಿ ಬಿ ಮುತ್ತುಸ್ವಾಮಿ 15, ಪಾರ್ಥೀವ್ ಪಟೇಲ್ ಸಿ ಇಮ್ರಾನ್ ತಾಹಿರ್ ಬಿ ಮ್ಯಾಥ್ಯೂಸ್ 28, ಉನ್ಮುಕ್ತ್ ಚಾಂದ್ ಸ್ಟಂಪ್ಡ್ ಜಾಧವ್ ಬಿ ಅಮಿತ್ 14,
ರೋಹಿತ್ ಶರ್ಮಾ ಸಿ ನದೀಮ್ ಬಿ ಕಾಲ್ಟರ್-ನೀಲ್ 30, ಪೊಲಾರ್ಡ್ ಸಿ ನದೀಮ್ ಬಿ ಅಮಿತ್ 10, ಆಂಬಟಿ ರಾಯುಡು ಸಿ ಕಾಲ್ಟರ್-ನೀಲ್ ಬಿ ಇಮ್ರಾನ್ ತಾಹಿರ್ 30, ಹರ್ಭಜನ್ ಸಿಂಗ್ ಸಿ ಬದಲಿಗ (ಜಾಧವ್) ಬಿ ಇಮ್ರಾನ್ ತಾಹಿರ್, ಮೆಕ್ಲಾನಾಘನ್ ಸಿ ಜಾಧವ್ ಬಿ ಇಮ್ರಾನ್ ತಾಹಿರ್ 0, ಲಸಿತ್ ಮÁಲಿಂಗ ಅಜೇಯ 6, ಬುರ್ಮಾ ಅಜೇಯ 0. ಇತರೆ (ಲೆಗ್‍ಬೈ 2, ವೈಡ್ 9) 11.
ವಿಕೆಟ್ ಪತನ: 1--35, 2--48, 3--68, 4--82, 5--131, 6--131, 7--135, 8--135, 9--153.
ಬೌಲಿಂಗ್ ವಿವರ: ಕಾಲ್ಟರ್-ನೀಲ್ 4-0-36-1, ಮುತ್ತುಸ್ವಾಮಿ 2-0-7-1, ಡುಮಿನಿ 1-0-14-0, ಆ್ಯಂಜೆಲೊ ಮ್ಯಾಥ್ಯೂಸ್ 2-0-15-2, ಅಮಿತ್ ಮಿಶ್ರಾ 4-0-32-2, ನದೀಮ್ 3-0-25-0, ಇಮ್ರಾನ್ ತಾಹಿರ್ 4-0-22-3.
ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.