ಸೂಪರ್ ಓವರ್‍ನಲ್ಲಿ ಕಿಂಗ್ಸ್ ಗೆ ಸೂಪರ್ ಜಯ
ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಆದರೆ, ನಂತರದ ಸೂಪರ್ ಓವರ್‍ನ ಅದೃಷ್ಟ ಪರೀಕ್ಷೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಯಶಸ್ಸು ಕಂಡರೆ, ರಾಜಸ್ಥಾನ ರಾಯಲ್ಸ್ ಸೋಲು ಕಾಣದೇ ವಿಧಿ ಇರಲಿಲ್ಲ...

ಅಹ್ಮದಾಬಾದ್: ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಆದರೆ, ನಂತರದ ಸೂಪರ್ ಓವರ್‍ನ ಅದೃಷ್ಟ ಪರೀಕ್ಷೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಯಶಸ್ಸು ಕಂಡರೆ, ರಾಜಸ್ಥಾನ ರಾಯಲ್ಸ್ ಸೋಲು ಕಾಣದೇ ವಿಧಿ ಇರಲಿಲ್ಲ.
ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೂಪರ್ ಓವರ್‍ನಲ್ಲಿ ಮೊದಲು ಬ್ಯಾಟ್ ಮಾಡಿ 15 ರನ್‍ಗಳಿಸಿತು. ಉತ್ತರವಾಗಿ ರಾಜಸ್ಥಾನ ರಾಯಲ್ಸ್ ಮೊದಲ 3 ಎಸೆತಗಳನ್ನು ಎದುರಿಸುವಲ್ಲಿ ಕೇವಲ 6 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಇದರೊಂದಿಗೆ ಸತತ 5 ಪಂದ್ಯಗಳಿಂದ ಗೆದ್ದು ಬೀಗುತ್ತಿದ್ದ ರಾಜಸ್ಥಾನ ರಾಯಲ್ಸ್, ಟೂರ್ನಿಯಲ್ಲಿ ಮೊದಲ ಸೋಲಿನ ಕಹಿ ಅನುಭವಿಸಿದಂತಾಯಿತು.
.
ಇದಕ್ಕೂ ಮುನ್ನ ನಿಗದಿತ ಓವರುಗಳಲ್ಲಿ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್‍ಗಳಿಸಿತ್ತು. ಉತ್ತರವಾಗಿ 192 ರನ್‍ಗಳ ಗುರಿ ಬೆಂಬತ್ತಿದ್ದ ಕಿಂಗ್ಸ್ ಪಂಜಾಬ್ ಸಹ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್‍ಗಳನ್ನೇ ಮಾಡುವುದರೊಂದಿಗೆ ಪಂದ್ಯ ಟೈ ಆಯಿತು. ಇದಕ್ಕೆ ಮುನ್ನ ನಿಗದಿತ ಓವರುಗಳಲ್ಲಿ ಒಂದು ಹಂತದಲ್ಲಿ ಪಂಜಾಬ್ 17 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿದಾಗ ಸೋಲುವ ಭೀತಿಯಲ್ಲಿತ್ತು. ಆದರೆ, ಡೇವಿಡ್ ಮಿಲ್ಲರ್ (54ರನ್, 30 ಎಸೆತ, 1 ಬೌಂಡರಿ, 5 ಸಿಕ್ಸರ್) ಮತ್ತು ಇದಕ್ಕೂ ಮುನ್ನ ಅಬ್ಬರಿಸಿದ್ದ ಶಾನ್ ಮಾರ್ಶ್ (65ರನ್, 40 ಎಸೆತ, 5 ಬೌಂಡರಿ, 3 ಸಿಕ್ಸರ್) ಪಂಜಾಬ್ ಪಾಳಯದಲ್ಲಿ ಜಯದ ಆಸೆ ಚಿಗುರಿಸಿದರು.
ಕೊನೆಯ ಓವರಿನಲ್ಲಿ ಪಂಜಾಬ್‍ಗೆ ಗೆಲ್ಲಲು 14 ರನ್‍ಗಳು ಬೇಕಿತ್ತು. ಫಾಲ್ಕನರ್ ಎಸೆದ ಈ ಓವರಿನಲ್ಲಿ ಪಟೇಲ್ 8 ಮತ್ತು ಜಾನ್ಸನ್ 5 ರನ್ ಗಳಿಸುವುದರೊಂದಿಗೆ ಪಂದ್ಯ ಟೈ ಆಯಿತು. ಅಂತಿಮ ಎಸೆತದಲ್ಲಿ ಗೆಲ್ಲಲು 5 ರನ್‍ಗಳು ಬೇಕಿದ್ದಾಗ ಪಟೇಲ್ ಬೌಂಡರಿ ಸಿಡಿಸಿದರು. ರಾಜಸ್ಥಾನಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟ ರಹಾನೆ-ವ್ಯಾಟ್ಸನ್: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್‍ಗಳಿಸಿತು.
ಅಜಿಂಕ್ಯ ರಹಾನೆ ಮತ್ತು ನಾಯಕ ಶೇನ್ ವ್ಯಾಟ್ಸನ್ ಮೊದಲ ವಿಕೆಟ್‍ಗೆ 11.3 ಓವರುಗಳಲ್ಲಿ 95 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ವ್ಯಾಟ್ಸನ್ (45ರನ್, 35 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಹಾದಿಯಲ್ಲಿ ಮುಗ್ಗರಿಸಿ ವಿಕೆಟ್ ಕೈಚೆಲ್ಲಿದರೆ, ರಹಾನೆ ಮಾತ್ರ ಸತತ ಮೂರನೇ ಅರ್ಧಶತಕ ಪೂರೈಸಿದರು. ಅವರು 54 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‍ಗಳಿದ್ದ 74 ರನ್ಗಳಿಸಿ ಪೆವಿಲಿಯನ್ ಸೇರಿದರು. ಕರುಣ್ ನಾಯರ್ 25 ರನ್ (13 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಸ್ಟುವರ್ಟ್ ಬಿನ್ನಿ 4 ಎಸೆತಗಳಲ್ಲಿ ತಲಾ 1 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 12 ರನ್‍ಗಳಿಸಿ ತಂಡದ ಮೊತ್ತ ದ್ವಿಶತಕದ ಗಡಿಯ ಸಮೀಪ ಬಂದು ನಿಲ್ಲಲು ಕಾರಣರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


