ರಾಜ್ಯದ ಶರತ್ ಗಾಯಕ್ವಾಡ್ ಸೇರಿ 4 ಪ್ಯಾರಾ ಅಥ್ಲೀಟ್‍ಗಳಿಗೆ ಹೃತಿಕ್ ಸಹಾಯ ಹಸ್ತ
ಮುಂದಿನ ವರ್ಷ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ ಪ್ಯಾರಾ ಅಥ್ಲೀಟ್ ಗಳ ನೆರವಿಗಾಗಿ ರು.20 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹ ಮಾಡಿಕೊಡುವುದಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಭರವಸೆ ನೀಡಿದ್ದಾರೆ...

ನವದೆಹಲಿ: ಮುಂದಿನ ವರ್ಷ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ ಪ್ಯಾರಾ ಅಥ್ಲೀಟ್ ಗಳ ನೆರವಿಗಾಗಿ ರು.20 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹ ಮಾಡಿಕೊಡುವುದಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಪ್ಯಾರಾ ಅಥ್ಲೆಟಿಕ್ಸ್‍ನ ಮೂಲಸೌಕರ್ಯ ಹಾಗೂ ಆರ್ಥಿಕ ಸಮಸ್ಯೆ ಕುರಿತ ವರದಿಯನ್ನು ತಿಳಿದ ನಂತರ ಹೃತಿಕ್ ರೋಷನ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ಈಜುಪಟುಗಳಾದ ಕರ್ನಾಟಕದ ಶರತ್ ಗಾಯಕ್ವಾಡ್ ಅಲ್ಲದೇ ನಿರಂಜನ್ ಮುಕುಂದನ್ ಮತ್ತು ಪವರ್ ಲಿಫ್ಟರ್‍ಗಳಾದ ರಾಜಿಂದರ್ ಸಿಂಗ್ ಮತ್ತು ಸಕಿನ ಖಾತುನ್ ಅವರಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಪ್ಯಾರಾ ಅಥ್ಲೀಟ್‍ಗಳ ಸಮಸ್ಯೆ ಕುರಿತು ಹೃತಿಕ್ ವರದಿ ನೋಡಿದ ನಂತರ, ತಮ್ಮ ಸ್ನೇಹಿತರನ್ನು ಸಂಪರ್ಕಿಸಿದ್ದಾರೆ. ಮತ್ತೊಬ್ಬ ನಟ ಕುನಾಲ್ ಕಪೂರ್ ಅಥ್ಲೀಟ್‍ಗಳ ನೆರವಿಗಾಆಗಿ ದೇಣಿಗೆ ಸಂಗ್ರಹಿಸುವ ಸಂಸ್ಥೆಯನ್ನು ನಡೆಸುತ್ತಿದ್ದು, ಇವರ ಮೂಲಕ ಪ್ಯಾರಾ ಅಥ್ಲೀಟ್‍ಗಳಿಗೆ ನೆರವಾಗಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೃತಿಕ್‍ನ ಆಪ್ತರು ತಿಳಿಸಿದ್ದಾರೆ.
ಪ್ರತಿ ಅಥ್ಲೀಟ್‍ಗಳು ತರಬೇತಿ, ಪ್ರಯಾಣ, ದೈಹಿಕ ತರಬೇತಿ, ಸಪ್ಲಿಮೆಂಟ್ಸ್, ಇತರೆ ಸಾಮಾಗ್ರಿ ಸೇರಿದಂತೆ ರು.5 ಲಕ್ಷ ವೆಚ್ಚ ತಗಲುತ್ತದೆ. ಹಾಗಾಗಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಹೃತಿಕ್ ರು.20 ಲಕ್ಷ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಹಣದಿಂದ ಈ ಅಥ್ಲೀಟ್‍ಗಳು 2016ರ ರಿಂಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಿದಟಛಿತೆ ನಡೆಸಲು ನೆರವಾಗುತ್ತದೆ ಎಂದರು. ಇತ್ತೀಚೆಗೆ ಕ್ರೀಡಾಕೂಟದಲ್ಲಿ ಪ್ಯಾರಾ ಅಥ್ಲೀಟ್‍ಗಳಿಗೆ ಕಳಪೆ ಸೌಕರ್ಯ ನೀಡಿದ ಕುರಿತು ವರದಿ ಓದಿದ್ದೆ. ನಂತರ ತೀವ್ರ ಬೇಸರವಾಯಿತು. ಹಾಗಾಗಿ ಅವರಿಗೆ ನೆರವು ನೀಡಬೇಕೆಂದು ನಿರ್ಧರಿಸಿದೆಎಂದು ಹೃತಿಕ್ ಸಾಮಾಜಿಕ ತಾಣದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


