ಬ್ಯಾಟ್ ಸ್ಪೀಡ್‍ಗನ್ ಆಗಿರಬೇಕಿತ್ತು: ರಸೆಲ್
ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್ ಗಳನ್ನು ದಂಡಿಸಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಗೆಲವು ತಂದುಕೊಟ್ಟ ಆಲ್ರೌಂಡರ್ ಆ್ಯಂಡ್ರೆ ರಸೆಲ್...

ಪುಣೆ: ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರ್ ಗಳನ್ನು ದಂಡಿಸಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಗೆಲವು ತಂದುಕೊಟ್ಟ ಆಲ್ರೌಂಡರ್ ಆ್ಯಂಡ್ರೆ ರಸೆಲ್, ನನ್ನ ಬ್ಯಾಟಿಂಗ್ ಸ್ಪೀಡ್‍ಗನ್
ಆಗಿರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ 36 ಎಸೆತಗಳಲ್ಲಿ 66 ರನ್ ಗಳಿಸಿದ್ದ ರಸೆಲ್, ಕೋಲ್ಕತಾ ಗೆಲವಿಗೆ ಕಾರಣರಾಗಿದ್ದಲ್ಲದೇ, ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಪಂದ್ಯದ ನಂತರ ಮಾತನಾಡಿದ ರಸೆಲ್, ಟಿ-20 ಮಾದರಿಯ ಕ್ರಿಕೆಟ್ ಅನ್ನು ಆನಂದಿಸುತ್ತಾ ಆಡಬೇಕು. ಹಾಗಾಗಿ ಈ ಪಂದ್ಯದಲ್ಲಿ ನನ್ನ ಆಟವನ್ನು ಆನಂದಿಸುತ್ತಾ ಆಡಿದೆ. ನನ್ನ ಬ್ಯಾಟ್‍ನಲ್ಲಿ ಸ್ಪೀಡ್‍ಗನ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದರು.
ಆರಂಭದಲ್ಲಿ ನಮ್ಮ ಮುಂದಿದ್ದ ಗುರಿಯ ಹಾದಿ ಸುಲಭವಾಗಿರಲಿಲ್ಲ. ಆದರೂ ನಾವು ಅಂತಿಮದವರೆಗೂ ಹೋರಾಟ ನಡೆಸಿದರೆ ಗೆಲವು ಸಾಧ್ಯ ಎಂಬುದು ಗೊತ್ತಿತ್ತು. ಹಾಗಾಗಿ ನಮ್ಮ ಯೋಜನೆಗೆ
ತಕ್ಕಂತೆ ಆಡಿದೆವು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


