ನನಗೆ ರು.16 ಕೋಟಿ ಕೊಡಿ ಅಂತ ಕೇಳಿರಲಿಲ್ಲ
ನನಗೆ ರು.16 ಕೋಟಿ ಕೊಡಿ ಅಂತ ನಾನು ಯಾರಲ್ಲೂ ಬೇಡಿರಲಿಲ್ಲ. ಇತರ ಆಟಗಾರರಂತೆಯೇ ನಾನೂ ಈ ಬಾರಿಯ ಐಪಿಎಲ್ ನಲ್ಲಿ ಹರಾಜಾಗಿದ್ದೇನಷ್ಟೇ..

ನವದೆಹಲಿ: `ನನಗೆ ರು.16 ಕೋಟಿ ಕೊಡಿ ಅಂತ ನಾನು ಯಾರಲ್ಲೂ ಬೇಡಿರಲಿಲ್ಲ. ಇತರ ಆಟಗಾರರಂತೆಯೇ ನಾನೂ ಈ ಬಾರಿಯ ಐಪಿಎಲ್ ನಲ್ಲಿ ಹರಾಜಾಗಿದ್ದೇನಷ್ಟೇ.. ಡೆಲ್ಲಿ ತಂಡದ ಬ್ಯಾಟ್ಸ್‍ಮನ್ ಯುವರಾಜ್ ಸಿಂಗ್ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಐಪಿಎಲ್ ಆಟಗಾರರ ಹರಾಜಿಗೂ ಕೆಲವೇ ದಿನಗಳ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಿಂದ ಗೇಟ್ ಪಾಸ್ ಪಡೆದಿದ್ದ ಅವರಿಗೆ ಡೆಲ್ಲಿ ತಂಡ 16 ಕೋಟಿ ಕೊಟ್ಟು ಖರೀದಿಸಿತ್ತು. ಆದರೆ, ಈಗ ಡೆಲ್ಲಿ ತಂಡದ ಪರ ಆಡಿದ್ದು ಅಷ್ಟಕ್ಕಷ್ಟೇ. ಇದೇ ಕಾರಣಕ್ಕಾಗಿ ತಮ್ಮನ್ನು ಪ್ರಶ್ನಿಸಿದ ಸುದ್ದಿಗಾರರಿಗೆ ಹೀಗೆ ಖಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ಮಾತುಗಳನ್ನು ಮುಂದುವರೆಸಿ, ನಾನು ರು.16 ಕೋಟಿ ಪಡೆದದ್ದಕ್ಕೇ ನನ್ನ ಮೇಲೆ ಒತ್ತಡವಿಲ್ಲ. ನನಗೆ ಕ್ರಿಕೆಟ್ ಅಂದರೆ ಜೀವ. ಹಣ ಸಿಗದೇ ಇದ್ದಿದ್ದರೂ ನಾನು ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿದ್ದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


