ಕ್ರೀಡೆ

ಹಾಕ್ಸ್ ಹಾಕಿ: ಭಾರತಕ್ಕೆ ಸೋಲು

ಹಾಕ್ಸ್ ಬೇ ಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ವನಿತೆಯರ ಸವಾಲು ಅಂತ್ಯಗೊಂಡಿದೆ...

ಹಾಕ್ಸ್ ಹಾಕಿ: ಭಾರತಕ್ಕೆ ಸೋಲು
ಹಾಕ್ಸ್ ಹಾಕಿ: ಭಾರತಕ್ಕೆ ಸೋಲು
Published On :

ಹೇಸ್ಟಿಂಗ್ಸ್ (ನ್ಯೂಜಿಲೆಂಡ್): ಹಾಕ್ಸ್ ಬೇ ಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ವನಿತೆಯರ ಸವಾಲು ಅಂತ್ಯಗೊಂಡಿದೆ.

 ಗುರುವಾರ ನಡೆದ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ 1-4 ಗೋಲುಗಳ ಅಂತರದಲ್ಲಿ ಮಣಿದು ಪ್ರಶಸ್ತಿಯ ಹಾದಿಯಿಂದ ವಿಮುಖವಾಗಿದೆ. ಪಂದ್ಯದ 6ನೇ ನಿಮಿಷದಲ್ಲಿ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಭಾರತ ತಂಡದ ನಾಯಕಿ ರಿತು ರಾಣಿ ಗೋಲು ಗಳಿಸಿ ಪ್ರಭುತ್ವ ಸಾಧಿಸಿದರು. ಆದರೆ, ಈ ಪ್ರಭುತ್ವ ಕೆಲವೇ ನಿಮಿಷಗಳದ್ದಾಗಿತ್ತು. ಮುಂದಿನ ನಿಮಿಷದಲ್ಲೇ ತನ್ನ ಮೊದಲ ಗೋಲು ದಾಖಲಿಸಿದ ನ್ಯೂಜಿಲೆಂಡ್, ಭಾರತದೊಂದಿದೆ ಸಮಬಲ ಸಾಧಿಸಿತು.

ಈ ಗೋಲು ಗಳಿಸಿಕೊಟ್ಟಿದ್ದು ಪೇತ್ರಾ ವೆಬರ್. ಇದಾದ ಮೇಲೆ, ಆತಿಥೇಯರಿಗೆ ಒಂದು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತ್ತಾದರೂ, ಭಾರತದ ರಕ್ಷಣಾ ವಿಭಾಗದ ಆಟಗಾರ್ತಿಯರ ಪ್ರಯತ್ನದಿಂದ ಈ ಗೋಲು ನ್ಯೂಜಿಲೆಂಡ್‍ಗೆ ಲಭ್ಯವಾಗಲಿಲ್ಲ. ಆದರೆ, ಈ ವೈಫಲ್ಯವನ್ನು ಮೆಟ್ಟಿದ ಕಿವೀಸ್ ಆಟಗಾರ್ತಿಯರು 28ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಭಾರತದ ವಿರುದ್ಧ 2-1ರ ಮುನ್ನಡೆ ಪಡೆದುಕೊಂಡರು.

ಪಂದ್ಯದ ಮೂರನೇ ಕ್ವಾರ್ಟರ್‍ನಲ್ಲಿ ಭಾರತ ಗೋಲು ಗಳಿಸಲು ಮಾಡಿ ಪ್ರಯತ್ನಗಳು ಕೂದಲೆಳೆಯಲ್ಲಿ ವಿಫಲವಾದವು. ಆದರೆ, ಇದೇ ಹಂತದಲ್ಲಿ ನ್ಯೂಜಿಲೆಂಡ್ ಮತ್ತೊಂದು ಗೋಲು ಗಳಿಸಿ 3-1ರ ಮುನ್ನಡೆ ಪಡೆದುಕೊಂಡಿತು. ಇನ್ನು, ಪಂದ್ಯದ 55ನೇ ನಿಮಿಷದಲ್ಲಿ ಎಲ್ಲಾ ಗುನ್ಸನ್ ಗಳಿಸಿದ ಫೀಲ್ಡ್ ಗೋಲು ಆ ತಂಡಕ್ಕೆ 4-1ರ ಮುನ್ನಡೆಯೊಂದಿಗೆ ಜಯವನ್ನೂ ತಂದುಕೊಟ್ಟಿತು. ಅಮೆರಿಕ ಹಾಗೂ ಕೊರಿಯಾ ತಂಡಗಳ ನಡುವೆ ನಡೆಯಲಿರುವ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲುವ ತಂಡದೊಂದಿಗೆ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.