ಕ್ರೀಡೆ

ಐಸಿಸಿ ಮುಖ್ಯಸ್ಥರಾಗಿ ಶ್ರೀನಿವಾಸನ್ ಮುಂದುವರಿಕೆ: ಠಾಕೂರ್

ಸೆಪ್ಟೆಂಬರ್ ವರೆಗೆ ಐಸಿಸಿ ಮುಖ್ಯಸ್ಥರಾಗಿ ಎನ್ ಶ್ರೀನಿವಾಸನ್ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್...

ಐಸಿಸಿ ಮುಖ್ಯಸ್ಥರಾಗಿ ಶ್ರೀನಿವಾಸನ್ ಮುಂದುವರಿಕೆ: ಠಾಕೂರ್
ಎನ್ ಶ್ರೀನಿವಾಸನ್
Published On :

ನವದೆಹಲಿ: ಸೆಪ್ಟೆಂಬರ್ ವರೆಗೆ ಐಸಿಸಿ ಮುಖ್ಯಸ್ಥರಾಗಿ ಎನ್ ಶ್ರೀನಿವಾಸನ್ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಗುರುವಾರ ಹೇಳಿದ್ದಾರೆ.

ಬಿಸಿಸಿಐ ವಾರ್ಷಿಕ ಸಭೆ ಸೆಫ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು, ಅಲ್ಲಿಯವರೆಗೇ ಶ್ರೀನಿವಾಸ್ ಅವರು ಐಸಿಸಿ ಮುಖ್ಯಸ್ಥರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ನಿಯಮಗಳ ಪ್ರಕಾರ ಎರಡು ವರ್ಷಗಳ ಕಾಲ ಅಂದರೆ 2014ರಿಂದ ಜೂನ್ 2016ರ ವರೆಗೆ ಬಿಸಿಸಿಐ ಸದಸ್ಯರೊಬ್ಬರು ಐಸಿಸಿ ಮುಖ್ಯಸ್ಥರಾಗಿರಬೇಕು. ಶ್ರೀನಿವಾಸನ್ ಅವರು ಬಿಸಿಸಿಐ ಪ್ರತಿನಿಧಿಯಾಗಿದದ್ದು ಅವರು ಸೆಪ್ಟೆಂಬರ್ 2015ರವರೆಗೆ ಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಅದೇ ರೀತಿ ಪದಾಧಿಕಾರಿಗಳ ವಾರ್ಷಿಕ ಸಭೆಯು ನಡೆಸಲಾಗುವುದು ಎಂದು ಅನುರಾಗ್ ಸ್ಪಷ್ಟಪಡಿಸಿದ್ದಾರೆ.

ಬಿಸಿಸಿಐನಿಂದ ಶ್ರೀನಿವಾಸ್ ಅವರು ಸರ್ವಾನುಮತದಿಂದ ಆಯ್ಕೆ ಆದವರು. ಶ್ರೀನಿವಾಸ್ ಅವರು ಐಸಿಸಿ ಮುಖ್ಯಸ್ಥರಾಗಿ ತಮ್ಮ ಅವಧಿ ಪೂರ್ಣಗೊಳಿಸಬೇಕು ಅಥವಾ ಬೇಡವೋ ಎಂಬದು ಮಂಡಳಿ ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.