ಶೀಘ್ರದಲ್ಲೇ ಜೂನಿಯರ್ ಮಲಿಕ್: ಶೊಯೇಬ್ ಮಲಿಕ್
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ನ ವಿಶ್ವ ರ್ಯಾಂಕಿಂಗ್‍ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸುತ್ತಿದ್ದಂತೆ...

ಕರಾಚಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್ ನ ವಿಶ್ವ ರ್ಯಾಂಕಿಂಗ್‍ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸುತ್ತಿದ್ದಂತೆ ಸಹಸ್ರಾರು ಮಂದಿ ಸಾಮಾಜಿಕ ತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದರು. ಅದೇ ರೀತಿ ಪತಿ ಶೊಯೇಬ್ ಮಲಿಕ್ ಕೂಡ ಅಭಿನಂದನೆ ಸಲ್ಲಿಸಿದ್ದರು.
ಸಾಮಾಜಿಕ ತಾಣದಲ್ಲಿ ಸಾನಿಯಾ ಮಿರ್ಜಾ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿರುವ ಪತಿ ಶೊಯೇಬ್ ಮಲಿಕ್, ಶೀಘ್ರದಲ್ಲೇ ಜೂನಿಯರ್ ಮಲಿಕ್ ಬರುವುದಾಗಿ ತಿಳಿಸಿದ್ದಾರೆ. ಈ ವೇಳೆ ತಾವು ಸಾನಿಯಾ ಮಿರ್ಜಾ ಅವರ ನಂಬರ್ ಒನ್ ಅಭಿಮಾನಿಗಿರುವುದಾಗಿಯೂ ಹೇಳಿಕೊಂಡಿರುವ ಪಾಕಿಸ್ತಾನದ ಕ್ರಿಕೆಟರ್ ಶೊಯೇಬ್ ಮಲಿಕ್, ವೃತ್ತಿಪರ ಕ್ರಿಕೆಟರ್ ಆಗದೇ ಇದ್ದಿದ್ದರೆ ಸಾನಿಯಾ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಸಾನಿಯಾ ನಂಬರ್ ಒನ್ ಸ್ಥಾನಕ್ಕೇರಿದಾಗ ಆಕೆಯೊಂದಿಗೆ ಇರಲಿಲ್ಲ. ಹಾಗಾಗಿ ಫೋನ್ ಮೂಲಕ ಅಭಿನಂದನೆ ಸಲ್ಲಿಸಿದೆ. ಅಲ್ಲದೆ ಕುಣಿದು ಆನಂದಿಸಿದೆ ಎಂದು ತಿಳಿಸಿದ್ದಾರೆ.
ಜೂನಿಯರ್ ಮಲಿಕ್ ಯಾವಾಗ ಬರಬಹುದು ಎಂದು ಕೇಳಿದ ಪ್ರಶ್ನೆಗೆ ಶೊಯೇಬ್, ದೇವರ ಅನುಗ್ರಹದಿಂದ ಅತಿ ಶೀಘ್ರದಲ್ಲಿ ಎಂದು ಉತ್ತರಿಸಿದ್ದಾರೆ. ಸಾನಿಯಾ ಮಿರ್ಜಾ ಭಾರತವನ್ನು ಪ್ರತಿನಿಧಿಸಿದ್ದರೂ ಈ ಸಾಧನೆಯಿಂದ ಪಾಕಿಸ್ತಾನಕ್ಕೂ ಹೆಮ್ಮೆ ಇದೆ. ಈ ಎರಡೂ ದೇಶಗಳ ಟೆನಿಸ್ ಆಟಗಾರರು ಹಾಗೂ ಅಭಿಮಾನಿಗಳು ಈ ಸಾಧನೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ ಎಂದು ಮಲಿಕ್ ಅಭಿಪ್ರಾಯಪಟ್ಟಿದ್ದಾರೆ.
ಸಾನಿಯಾರನ್ನು ಮದುವೆಯಾಗುವ ಮುನ್ನವೂ ಟೆನಿಸ್ ಅನ್ನು ಇಷ್ಟಪಡುತ್ತಿದ್ದೆ, ಆಕೆಯ ಪ್ರತಿ ಪಂದ್ಯವನ್ನು ವೀಕ್ಷಿಸುತ್ತೇನೆ. ಆಕೆಯಿಂದ ದೂರ ಉಳಿಯುವುದರಿಂದ ಆಕೆಯ ಪಂದ್ಯವನ್ನು ತಪ್ಪದೆ ನೋಡುತ್ತೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


