ಟೀಂ ಇಂಡಿಯಾ ನಾಯಕ ಧೋನಿಗೆ 500 ರು. ದಂಡ
ವಿಶ್ವಕಪ್ ಸೋಲಿನ ಕಹಿ ನೆನಪಿನೊಂದಿಗೆ ಸ್ವದೇಶಕ್ಕೆ ಮರಳಿರುವ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ...

ರಾಂಚಿ: ವಿಶ್ವಕಪ್ ಸೋಲಿನ ಕಹಿ ನೆನಪಿನೊಂದಿಗೆ ಸ್ವದೇಶಕ್ಕೆ ಮರಳಿರುವ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ, ತಮ್ಮ ಮೆಚ್ಚಿನ ಬೈಕ್ ವಿಂಟೆಜ್ ಬುಲೆಟ್ ನಲ್ಲಿ ಸೋಮವಾರ ನಗರದ ಪ್ರದರ್ಶನೆ ಮಾಡಿದ್ದರು. ಸಂದರ್ಭದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದು, ಈ ಸಂಬಂಧ ಸಂಚಾರಿ ಪೊಲೀಸರು ಧೋನಿಗೆ 500 ರು. ದಂಡ ವಿಧಿಸಿದ್ದಾರೆ.
ಸಂಚಾರಿ ನಿಯಮದಡಿ ವಾಹನದ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ನ್ನು ವಾಹನದ ಮುಂದೆ ಪ್ರದರ್ಶಿಸಬೇಕು. ಆದರೆ ಧೋನಿ ತಮ್ಮ ಬುಲೆಟ್ ನ ಮುಂದೆ ನಂಬರ್ ಪ್ಲೇಟ್ ನ್ನು ಪ್ರದರ್ಶಿಸದೆ. ಮುಂದಿನ ಚಕ್ರದ ಮಡ್ ಗಾರ್ಡ್ ನ ಎಡಬದಿಯಲ್ಲಿ ನಂಬರ್ ನ್ನು ಬರೆದಿದ್ದು, ಈ ಹಿನ್ನೆಲೆಯಲ್ಲಿ ಸೆಕ್ಷನ್ 122/179ರ ಮೋಟಾರು ಕಾಯ್ದೆ ಅಡಿಯಲ್ಲಿ 500 ದಂಡ ವಿಧಿಸಲಾಗಿದ್ದು, ಈ ದಂಡವನ್ನು ಧೋನಿ ಕುಟುಂಬದವರು ಕಟ್ಟಿರುವುದಾಗಿ ಸಂಚಾರಿ ಪೊಲೀಸ್ ಅಧೀಕ್ಷಕ ಕಾರ್ತಿಕ್ ಅವರು ಹೇಳಿದ್ದಾರೆ.
ತಮ್ಮ ವಿಂಜೆಟ್ ಬುಲೆಟ್ ನಲ್ಲಿ ಸವಾರಿ ಹೊರಟಿದ್ದ ಚಿತ್ರಗಳು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಈ ಚಿತ್ರಗಳ ಆಧಾರದ ಮೇಲೆ ಧೋನಿ ಅವರು ಸಂಚಾರಿ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಕಂಡುಬಂದಿದ್ದು , ಈ ಹಿನ್ನೆಲೆಯಲ್ಲಿ ಅವರಿಗೆ ದಂಡೆ ವಿಧಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


