ಧೋನಿ ಬಿಕಾರಿಯಾಗಿ ಬಿಡ್ತಾನೆ: ಅಪ್ಪನ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ: ಯುವರಾಜ್ ಸಿಂಗ್
ವಿಶ್ವಕಪ್ ಗೆ ತಮ್ಮ ಮಗ ಆಯ್ಕೆಯಾಗದಿರುವ ಕುರಿತಂತೆ ಕೋಪಗೊಂಡಿದ್ದ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ದ ಕಿಡಿಕಾರಿದ್ದರ ಕುರಿತಂತೆ ಸ್ಪಷ್ಟನೆ ನೀಡಿರುವ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರು ಅಪ್ಪನ ಹೇಳಿಕೆ...
ವಿಶ್ವಕಪ್ ಗೆ ತಮ್ಮ ಮಗ ಆಯ್ಕೆಯಾಗದಿರುವ ಕುರಿತಂತೆ ಕೋಪಗೊಂಡಿದ್ದ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ದ ಕಿಡಿಕಾರಿದ್ದರ ಕುರಿತಂತೆ ಸ್ಪಷ್ಟನೆ ನೀಡಿರುವ ಟೀಮ್ ಇಂಡಿಯಾ ಆಟಗಾರ ಯುವರಾಜ್ ಸಿಂಗ್ ಅವರು ಅಪ್ಪನ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ಚಾನೆಲೊಂದರಲ್ಲಿ ಸಂದರ್ಶನದ ವೇಳೆ ತಮ್ಮ ತಂದೆಯ ಹೇಳಿಕೆ ಕುರಿತಂತೆ ಮಾತನಾಡಿರುವ ಯುವರಾಜ್ ಸಿಂಗ್ ಅವರು, ತಮ್ಮ ತಂದೆಯ ಹೇಳಿಕೆಗೂ ತಮಗೂ ಯಾವುದೇ ಸಂಬಂಧವಿಲ್ಲ. ಧೋನಿಯೊಂದಿಗೆ ನನಗೆ ಯಾವುದೇ ಸಮಸ್ಯೆಯಿಲ್ಲ. ಧೋನಿ ಅವರ ನಾಯಕತ್ವದಲ್ಲಿ ಈಗಲೂ ಆಟವಾಡಲು ಬಯಸುತ್ತೇನೆ ಎಂದಿದ್ದಾರೆ. ಅಲ್ಲದೆ, ಧೋನಿ ತಂದೆಯಾಗಿದ್ದಕ್ಕೆ ಅಭಿನಂದಿಸುವ ಸಲುವಾಗಿ ಅವರನ್ನು ಭೇಟಿಯಾಗಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿಶ್ವಕಪ್- 2015 ರಲ್ಲಿ ಯುವರಾಜ್ ಸಿಂಗ್ ಆಯ್ಕೆಯಾಗದಿರುವುದಕ್ಕೆ ಧೋನಿಯೇ ಪ್ರಮುಖ ಕಾರಣ ಎಂದು ಆರೋಪಿಸಿದ್ದ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಧೋನಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಧೋನಿ ಒಬ್ಬ ಅಹಂಕಾರಿ. ರಾವಣನ ಅಹಂಕಾರ ಕೊನೆಯಾದಂತೆ ಒಂದು ದಿನ ಧೋನಿ ಇದಕ್ಕೆಲ್ಲಾ ಬೆಲೆ ತೆರಲೇ ಬೇರಾಗುತ್ತದೆ. ಧೋನಿ ಏನೂ ಆಗಿರಲಿಲ್ಲ. ಧೋನಿ ಈ ಮಟ್ಟಕ್ಕೆ ಬೆಳೆಯಲು ಕಾರಣ ಮಾಧ್ಯಮಗಳು. ಮಾಧ್ಯಮಗಳು ಹೊಗಳಿ ಅಟ್ಟಕ್ಕೇರಿಸಿದ ಕಾರಣವೇ ಧೋನಿಗೆ ಪಟ್ಟ ಕಟ್ಟುವಂತಾಯಿತು. ತನಗೆ ನೆರವು ನೀಡಿದ್ದ ಮಾಧ್ಯಮಗಳನ್ನು ಧೋನಿ ತುಚ್ಛವಾಗಿ ನೋಡುತ್ತಾನೆ. ಆತ ಒಂದೊಂದು ರನ್ ಪಡೆಯುವಾಗಲೂ ಪ್ರೋತ್ಸಾಹ ನೀಡುವ ಅಭಿಮಾನಿಗಳನ್ನು ನೋಡಿ ಆತ ವ್ಯಂಗ್ಯವಾಗಿ ನಗುತ್ತಾನೆ. ನಾನೊಬ್ಬ ಪತ್ರಕರ್ತನಾಗಿದ್ದರೆ ಧೋನಿಯ ಕಪಾಳಕ್ಕೆ ಬಾರಿಸುತ್ತಿದ್ದೆ. ಧೋನಿಯಂಥ ಮನುಷ್ಯನನ್ನು ನಾನು ನನ್ನ ಜೀವನದಲ್ಲಿ ನೋಡಿರಲಿಲ್ಲ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಧೋನಿ ವಿರುದ್ಧ ಕಿಡಿಕಾರಿದ್ದರು ಅಲ್ಲದೆ ಹಿಡಿಶಾಪ ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

