ಧೋನಿ ಬಿಕಾರಿಯಾಗಿ ಬಿಡ್ತಾನೆ: ಯೋಗರಾಜ್ ಸಿಂಗ್ ಹಿಡಿಶಾಪ
ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ದಿನ ಬಿಕಾರಿಯಾಗಿ ಬಿಡುತ್ತಾನೆ ಎಂದು ಯುವರಾಜ್ ಸಿಂಗ್‌ನ ಅಪ್ಪ ಯೋಗರಾಜ್ ಸಿಂಗ್...

ಮುಂಬೈ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದು ದಿನ ಬಿಕಾರಿಯಾಗಿ ಬಿಡುತ್ತಾನೆ ಎಂದು ಯುವರಾಜ್ ಸಿಂಗ್‌ನ ಅಪ್ಪ ಯೋಗರಾಜ್ ಸಿಂಗ್ ಹಿಡಿಶಾಪ ಹಾಕಿದ್ದಾರೆ.
ಧೋನಿ ಒಬ್ಬ ಅಹಂಕಾರಿ. ರಾವಣನ ಅಹಂಕಾರ ಕೊನೆಯಾದಂತೆ ಒಂದು ದಿನ ಧೋನಿ ಇದಕ್ಕೆಲ್ಲಾ ಬೆಲೆ ತೆರಲೇ ಬೇರಾಗುತ್ತದೆ. ಧೋನಿ ಏನೂ ಆಗಿರಲಿಲ್ಲ. ಧೋನಿ ಈ ಮಟ್ಟಕ್ಕೆ ಬೆಳೆಯಲು ಕಾರಣ ಮಾಧ್ಯಮಗಳು. ಮಾಧ್ಯಮಗಳು ಹೊಗಳಿ ಅಟ್ಟಕ್ಕೇರಿಸಿದ ಕಾರಣವೇ ಧೋನಿಗೆ ಪಟ್ಟ ಕಟ್ಟುವಂತಾಯಿತು. ತನಗೆ ನೆರವು ನೀಡಿದ್ದ ಮಾಧ್ಯಮಗಳನ್ನು ಧೋನಿ ತುಚ್ಛವಾಗಿ ನೋಡುತ್ತಾನೆ. ಆತ ಒಂದೊಂದು ರನ್ ಪಡೆಯುವಾಗಲೂ ಪ್ರೋತ್ಸಾಹ ನೀಡುವ ಅಭಿಮಾನಿಗಳನ್ನು ನೋಡಿ ಆತ ವ್ಯಂಗ್ಯವಾಗಿ ನಗುತ್ತಾನೆ. ನಾನೊಬ್ಬ ಪತ್ರಕರ್ತನಾಗಿದ್ದರೆ ಧೋನಿಯ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಯೋಗರಾಜ್ ಸಿಂಗ್ ಗುಡುಗಿದ್ದಾರೆ.
2011 ವಿಶ್ವಕಪ್ ಫೈನಲ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲು ಸಿದ್ಧನಾಗಿದ್ದ ಯುವರಾಜ್‌ನ್ನು ತಡೆದು ನಿಲ್ಲಿಸಿ ಧೋನಿ ಕ್ರೀಸ್ ಗಿಳಿದಿದ್ದನು. ಅಂದು ಬ್ಯಾಟಿಂಗ್ ಮಾಡಿದ ಧೋನಿ ಹೀರೋ ಆದ. ಹಾಗಾದರೆ ಈ ಬಾರಿ ಧೋನಿ ಯಾಕೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿಲ್ಲ? ಅಷ್ಟೊಂದು ಗತ್ತು ಇದ್ದರೆ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬರಬೇಕಿತ್ತು.
ಧೋನಿ ಬಗ್ಗೆ ಇತರ ಕ್ರಿಕೆಟಿಗರು ದೂರುವಾಗ ನಾನದನ್ನು ಕಡೆಗಣಿಸಿದ್ದೆ. ಅಸೂಯೆಯಿಂದ ಅವರು ಈ ರೀತಿ ಮಾತಾಡುತ್ತಿದ್ದಾರೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಆಮೇಲೆ ನಿಜ ಸ್ಥಿತಿ ಗೊತ್ತಾಯ್ತು. ಅವನಂಥ ಮನುಷ್ಯನನ್ನು ನಾನು ನನ್ನ ಜೀವನದಲ್ಲಿ ನೋಡಿಲ್ಲ ಎಂದಿದ್ದಾರೆ ಯೋಗರಾಜ್ ಸಿಂಗ್.
ಆದಾಗ್ಯೂ, ಅಪ್ಪನ ಹೇಳಿಕೆಯ ಬಗ್ಗೆ ಯುವರಾಜ್ ಸಿಂಗ್ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


