ವಿಶ್ವ ನಂಬರ್ ೧ರತ್ತ ಸಾನಿಯಾ ಮಿರ್ಜಾ ದಾಪುಗಾಲು
ಮಯಾಮಿ ಓಪನ್ ನಲ್ಲಿ ಮಾರ್ಟಿನಾ ಹಿಂಗಿಸ್ ಜೊತೆ ಪ್ರಶಸ್ತಿ ಗೆಲ್ಲುವುದರೊಂದಿಗೆ ೧೦೦೦ ರ್ಯಾಂಕಿಂಗ್ ಅಂಕ ಗಳಿಸಿ, ವಿಶ್ವ ಡಬಲ್ಸ್ ನಲ್ಲಿ

ನವದೆಹಲಿ: ಮಯಾಮಿ ಓಪನ್ ನಲ್ಲಿ ಮಾರ್ಟಿನಾ ಹಿಂಗಿಸ್ ಜೊತೆ ಪ್ರಶಸ್ತಿ ಗೆಲ್ಲುವುದರೊಂದಿಗೆ ೧೦೦೦ ರ್ಯಾಂಕಿಂಗ್ ಅಂಕ ಗಳಿಸಿ, ವಿಶ್ವ ಡಬಲ್ಸ್ ನಲ್ಲಿ ನಂಬರ್ ೧ ಪಟ್ಟದತ್ತ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಪುಗಾಲು ಹಾಕಿದ್ದಾರೆ.
ಸದ್ಯಕ್ಕೆ ಸಾನಿಯಾ ಮೂರನೇ ಸ್ಥಾನದಲ್ಲಿದ್ದರು, ೭೬೪೦ ಅಂಕಗಳೊಂದಿಗೆ ಮೊದಲ ಮತ್ತು ಎರಡನೇ ಸ್ಥಾನ ಹಂಚಿಕೊಂಡಿರುವ ಇಟಾಲಿಯನ್ ಜೋಡಿ ಸಾರಾ ಏರ್ರಾಣಿ ಮತ್ತು ರಾಬರ್ಟಾ ವಿನ್ಸಿ ಅವರಿಗಿಂತ ಕೇವಲ ೧೪೫ ಅಂಕ ಹಿಂದಿದ್ದಾರೆ.
ಮಾರ್ಟಿನಾ ಜೊತೆ ಎರಡು ಪ್ರಶಸ್ತಿ ಗೆಲ್ಲುವುದರೊಂದಿಗೆ ಸಾನಿಯಾ ೭೪೯೫ ಅಂಕ ಪಡೆದು ಈಗ ಮೂರನೆ ಸ್ಥಾನ ಕಾಯ್ದುಕೊಂಡಿದಾರೆ.
ಸಾನಿಯಾ ಈ ವಾರ ಚಾರ್ಲೆಸ್ಟನ್ ನಲ್ಲಿ ಪ್ರಾರಂಭವಾಗುವ ಫ್ಯಾಮಿಲಿ ಸರ್ಕಲ್ ಪ್ರಶಸ್ತಿ ಗೆಲ್ಲಬೇಕಷ್ಟೇ ಮೊದಲನೇ ಸ್ಥಾನಕ್ಕೆ ಏರುವುದಕ್ಕೆ. ಈ ಹಿಂದೆ ೨೦೧೧ ರಲ್ಲಿ ಸಾನಿಯಾ ಚಾರ್ಲೆಸ್ಟನ್ ನಲ್ಲಿ ಎಲೆನಾ ವೆಸ್ನಿಯಾ ಜೊತೆ ಪ್ರಶಸ್ತಿ ಗೆದ್ದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


