ಫಿಕ್ಸಿಂಗ್ ಮುಕ್ತ ಐಪಿಎಲ್ ಪ್ರತಿ ಕ್ರಿಕೆಟಿಗನ ಜವಾಬ್ದಾರಿ: ರಾಹುಲ್ ಕಿವಿಮಾತು
ಐಪಿಲ್ 2013ನೇ ಸಾಲಿನ ಟೂರ್ನಿಯ ಫಿಕ್ಸಿಂಗ್ ಹಗರಣ ಪುನಃ ಮರುಕಳಿಸದಂತೆ ಮಾಡುವ ಜವಾಬ್ದಾರಿ ಈ ಬಾರಿಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ...

ಜೈಪುರ: ಐಪಿಲ್ 2013ನೇ ಸಾಲಿನ ಟೂರ್ನಿಯ ಫಿಕ್ಸಿಂಗ್ ಹಗರಣ ಪುನಃ ಮರುಕಳಿಸದಂತೆ ಮಾಡುವ ಜವಾಬ್ದಾರಿ ಈ ಬಾರಿಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಕ್ರಿಕೆಟಿಗರ ಮೇಲಿದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಮಾರ್ಗದರ್ಶಕ ರಾಹುಲ್ ದ್ರಾವಿಡ್ ಕಿವಿಮಾತು ಹೇಳಿದ್ದಾರೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಿಕ್ಸಿಂಗ್ ಭೂತವನ್ನು ಹಿಮ್ಮೆಟ್ಟಿಸಲು ಎಲ್ಲಾ ಫ್ರಾಂಚೈಸಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಆದರೂ, ಇಡೀ ಟೂರ್ನಿಯನ್ನು ಕಳಂಕ ಮುಕ್ತವಾಗಿಸಲು ಇದಿಷ್ಟೇ ಸಾಲದು. ಟೂರ್ನಿಯನ್ನು ಫಿಕ್ಸಿಂಗ್ ಮುಕ್ತವಾಗಿಸುವ ಜವಾಬ್ದಾರಿ ಪ್ರತಿಯೊಬ್ಬ ಕ್ರಿಕೆಟಿಗನ ಮೇಲೂ ಇರುತ್ತದೆ. ಈ ನಿಟ್ಟಿನಲ್ಲಿ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕ್ರಿಕೆಟಿಗರೂ ತಮ್ಮ ಜವಾಬ್ದಾರಿಯನ್ನು ಅರಿತು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ ಎಂದರು.
ಐಪಿಎಲ್ 2013ರಲ್ಲಿ ತಮ್ಮ ತಂಡದ ಮೇಲೆ ಫಿಕ್ಸಿಂಗ್ ಕರಿನೆರಳು ಬಿದ್ದಿದ್ದರ ಬಗ್ಗೆ ಮಾತನಾಡಿದ ರಾಹುಲ್, `ಈ ಹಿಂದಿನ ಬೆಟ್ಟಿಂಗ್, ಫಿಕ್ಸಿಂಗ್ ಹಗರಣದಿಂದ ರಾಜಸ್ಥಾನ ತಂಡದ ಫ್ರಾಂಚೈಸಿ ಸಾಕಷ್ಟು ಪಾಠಗಳನ್ನು ಕಲಿತಿದೆ. ಹಾಗಾಗಿ, ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಮೇಲೆ ಯಾವುದೇ ಹಗರಣದ ಆರೋಪಗಳು ಬಾರದಂತೆ ರಾಜಸ್ಥಾನ ತಂಡ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಿದೆ. ಅಲ್ಲದೆ, ಇಡೀ ಟೂರ್ನಿಯನ್ನು ಹಗರಣ ಮುಕ್ತವನ್ನಾಗಿಸಲು ಪಣ ತೊಟ್ಟಿದೆ' ಎಂದರು.
ರಣಜಿ ಬಗ್ಗೆ ಗಮನ ಹರಿಸಿ
ಯುವ ಕ್ರಿಕೆಟಿಗರಿಗೆ ತಮ್ಮ ವೃತ್ತಿಜೀವನವನ್ನು ಕಟ್ಟಿಕೊಳ್ಳುವ ಬಗ್ಗೆ ಸಲಹೆ ನೀಡಿದ ರಾಹುಲ್, `ಕ್ರಿಕೆಟ್ ಜಗತ್ತಿಗೆ ಪದಾರ್ಪಣೆ ಮಾಡಿರುವ ಯುವ ಪ್ರತಿಭೆಗಳು ರಣಜಿ ಪಂದ್ಯಾವಳಿಯನ್ನು ಗಂಭೀರವಾಗಿ ಪರಿಗಣಿಸಬೇಕು. ರಣಜಿ ಟೂರ್ನಿಯಲ್ಲಿ ಮಾಡುವ ಸಾಧನೆ ಐಪಿಎಲ್ ಟೂರ್ನಿಗೆ ಕಾಲಿಡಲು ರಾಜಮಾರ್ಗ' ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


