ಫೈನಲ್ ಗೆ ಸಾನಿಯಾ ಹಿಂಗಿಸ್
ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್‍ಲೆಂಡ್‍ನ ಮಾರ್ಟಿನಾ ಹಿಂಗಿಸ್, ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‍ನಲ್ಲಿ ಫೈನಲ್ ..

ಮಿಯಾಮಿ (ಅಮೆರಿಕ): ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್‍ಲೆಂಡ್‍ನ ಮಾರ್ಟಿನಾ ಹಿಂಗಿಸ್, ಮಿಯಾಮಿ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‍ನಲ್ಲಿ ಫೈನಲ್ ಪ್ರವೇಶಿಸುವುದರೊಂದಿಗೆ ಸತತ ಎರಡನೇ ಪ್ರಶಸ್ತಿ ಗೆದ್ದುಕೊಳ್ಳುವ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ಟೂರ್ನಿಯ ಅಗ್ರಶ್ರೇಯಾಂಕಿತ ಜೋಡಿಯಾಗಿರುವ ಸಾನಿಯಾ ಮತ್ತು ಹಿಂಗಿಸ್, ಕಳೆದ ತಡರಾತ್ರಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಹಂಗರಿಯ ಟಿಮಿಯಾ ಬಾಬೊಸ್ ಮತ್ತು ಬ್ರೋರನ್ಸ್‍ನ ಕ್ರಿಸ್ಟಿನಾ ಮಾಡೆನೊವಿಚ್ ಅವರನ್ನು 6-2, 6-4 ನೇರ ಸೆಟ್ ಗಳಿಂದ ಪರಾಭವಗೊಳಿಸಿದರು.
ಸುಮಾರು ಒಂದು ಕಾಲು ಗಂಟೆ ನಡೆದ ಪಂದ್ಯದಲ್ಲಿ ಭಾರತ-ಸ್ವಿಸ್ ಜೋಡಿ ಅತ್ಯುತ್ತಮ ಹೊಂದಾಣಿಕೆ ಆಟ ಪ್ರದರ್ಶಿಸುವ ಮೂಲಕ ಏಳನೇ ಶ್ರೇಯÁಂಕಿತ ಎದುರಾಳಿ
ಜೋಡಿಗೆ ಎಚ್ಚೆತ್ತುಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಸಾನಿಯಾ ಮತ್ತು ಹಿಂಗಿಸ್, ರಷ್ಯಾದ ಏಕಟರಿನಾ ಮಕಾರೊವಾ ಮತ್ತು ಎಲೆನಾ ವೆಸ್ನಿನಾ ಅವರನ್ನು ಎದುರಿಸಲಿದ್ದಾರೆ. ಮಕಾರೊವಾ ಮತ್ತು ವೆಸ್ನಿನಾ, ತಮ್ಮ ಸೆಮಿಫೈನಲ್ ಪಂದ್ಯದಲ್ಲಿ 9ನೇ ಶ್ರೇಯಾಂಕಿತ ಜೋಡಿ ಆ್ಯಂಡ್ರಿಯಾ ಹಾವಾಕೊವಾ ಮತ್ತು ಲೂಸಿ ಹಾರ್ದಿಕಾ ಅವರನ್ನು 6-4, 6-2 ನೇರ ಸೆಟ್‍ಗಳಿಂದ ಪರಾಭವಗೊಳಿಸಿದರು.
ಈಗಾಗಲೇ ಎರಡು ವಾರಗಳ ಹಿಂದೆ ಬಿಎನ್‍ಪಿ ಪಾರಿಬಸ್ ಓಪನ್ ಟೂರ್ನಿಯಲ್ಲಿ ಇದೇ ಏಕಟರಿನಾ ಮತ್ತು ಎಲೆನಾ ಜೋಡಿಯನ್ನು ಫೈನಲ್‍ನಲ್ಲೇ ಮಣಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿದ್ದ ಸಾನಿಯಾ ಮತ್ತು ಹಿಂಗಿಸ್, ಈಗ ಮತ್ತೊಂದು ಸಾಧನೆಯ ಹಾದಿಯಲ್ಲಿದ್ದಾರೆ.
ಸಾನಿಯಾ ಅಭಿಮತ: ಕಳೆದ ಬಾರಿ ರಷ್ಯಾ ಜೋಡಿಯ ವಿರುದ್ಧ ತೋರಿದ್ದ ಪ್ರದರ್ಶನವನ್ನೇ ಈ ಸಲದ ಫೈನಲ್‍ನಲ್ಲೂ ಮುಂದುವರಿಸಿಕೊಂಡು ಹೋಗುವ ವಿಶ್ವಾಸ ಹೊಂದಿದ್ದೇವೆ. ಆದರೆ, ಹಿಂದಿನ ಪ್ರದರ್ಶನವನ್ನೇ ನಂಬಿಕೂರುವ ಹಾಗಿಲ್ಲ. ಪ್ರತಿ ಪಂದ್ಯವೂ ಹೊಸತು. ಹಾಗಾಗಿ, ಎಚ್ಚರಿಕೆಯಿಂದಲೇ ಏಕಟರಿನಾ ಮತ್ತು ಎಲೆನಾ ಅವರನ್ನು ಎದುರಿಸಬೇಕಾಗಿದೆ ಎಂದು ಸಾನಿಯಾ ಮಿರ್ಜಾ ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


