ಎಲ್ಲ ಮಾದರಿ ಕ್ರಿಕೆಟ್‍ನಿಂದ ಕಿವೀಸ್ ವೇಗಿ ಮಿಲ್ಸ್ ನಿವೃತ್ತಿ
ನ್ಯೂಜಿಲೆಂಡ್ ತಂಡದ ಮಧ್ಯಮ ವೇಗದ ಬೌಲರ್ ಕೈಲ್ ಮಿಲ್ಸ್ ಎಲ್ಲ ಮಾದರಿಯ ಕ್ರಿಕೆಟ್ ವೃತ್ತಿಗೆ ವಿದಾಯ ಘೋಷಿಸಿದ್ದಾರೆ. ಈ ಮುನ್ನ ತಂಡದ...

ಆಕ್ಲೆಂಡ್: ನ್ಯೂಜಿಲೆಂಡ್ ತಂಡದ ಮಧ್ಯಮ ವೇಗದ ಬೌಲರ್ ಕೈಲ್ ಮಿಲ್ಸ್ ಎಲ್ಲ ಮಾದರಿಯ ಕ್ರಿಕೆಟ್ ವೃತ್ತಿಗೆ ವಿದಾಯ ಘೋಷಿಸಿದ್ದಾರೆ. ಈ ಮುನ್ನ ತಂಡದ ಹಿರಿಯ ಆಟಗಾರ ಡೇನಿಯಲ್ ವೆಟೋರಿ ನಿವೃತ್ತಿ ನಿರ್ಧಾರ ಪ್ರಕಟಿಸಿದ ಮರುದಿನವೇ 36ರ ಮಿಲ್ಸ್ ಅವರು, ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದಾರೆ. ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್ ತಂಡಪ್ರತಿನಿ„ಸಿದ್ದ ಮಿಲ್ಸ್‍ಗೆ, ಒಂದು ಪಂದ್ಯದಲ್ಲೂ ಆಡಲು ಅವಕಾಶ ದೊರೆತಿರಲಿಲ್ಲ. ತಂಡ ಫೈ ನಲ್ ತಲುಪಿದರೂ ಬರೀ ಬೆಂಚ್ ಆಟಗಾರರಾಗಿಯೇ ಅವರು ಉಳಿದಿದ್ದರು.
ಒಟ್ಟು 170 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೈಲ್ ಮಿಲ್ಸ್, 27.02ರ ಸರಾಸರಿಯಲ್ಲಿ 240 ವಿಕೆಟ್ ಕಬಳಿಸಿದ್ದಾರೆ. 25 ರನ್ ನೀಡಿ 5 ವಿಕೆಟ್
ಪಡೆದಿದ್ದು, ಪಂದ್ಯವೊಂದರ ಉತ್ತಮ ಸಾಧನೆಯಾಗಿದೆ. 2 ಅರ್ಧಶತಕ ಒಳಗೊಂಡಂತೆ 1047 ರನ್ ಗಳಿಸಿದ್ದಾರೆ. ಇದಲ್ಲದೆ 19 ಟೆಸ್ಟ್‍ಗಳಲ್ಲಿ ನ್ಯೂಜಿಲೆಂಡ್
ಪ್ರತಿನಿಧಿ ಸಿರುವ ಅವರು, 33.02ರ ಸರಾಸರಿಯಲ್ಲಿ 44 ವಿಕೆಟ್ ಪಡೆದಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


