ಭಾರತಕ್ಕೆ ಎಫ್-೧ ೨೦೧೭ ರಲ್ಲಿ ಹಿಂತಿರುಗಲಿದೆಯೆ?
ನವದೆಹಲಿಯ ಬುಧ್ ಅಂತರಾಷ್ಟ್ರೀಯ ಸುತ್ತುಮಾರ್ಗ, ವಿಶ್ವ ವಿಖ್ಯಾತ ಕ್ರೀಡೆ ಎಫ್-೧ ...

ನವದೆಹಲಿ: ನವದೆಹಲಿಯ ಬುಧ್ ಅಂತರಾಷ್ಟ್ರೀಯ ಸುತ್ತುಮಾರ್ಗ, ವಿಶ್ವ ವಿಖ್ಯಾತ ಕ್ರೀಡೆ ಎಫ್-೧ ನನ್ನು ಭಾರತಕ್ಕೆ ತರಲು ಯಶಸ್ವಿಯಾಗಿತ್ತು. ಜೆಪಿ ಸಂಸ್ಥೆಯ ಜೆಪಿ ಸ್ಪೋರ್ಟ್ಸ್ ಇಂಟರ್ನ್ಯಾಶನಲ್, ಫಾರ್ಮುಲಾ ಒನ್ ಆಡಳಿತ ಮಂಡಲಿಯೊಂದಿಗೆ(ಎಫ್೧ಎ) ೫ ವರ್ಷಗಳ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ೨೦೧೩ ರಲ್ಲಿ ಎಫ್೧ಎ ಈ ಕ್ರೀಡೆಯ ಕ್ಯಾಲೆಂಡರಿನಿಂದ ಭಾರತವನ್ನು ಹೊರಹಾಕಿತ್ತು.
ಇದಕ್ಕೆ ಪ್ರಮುಖ ಕಾರಣ ಹೆಚ್ಚುವರಿ ತೆರಿಗೆಗಾಗಿ ಸರ್ಕಾರದ ಅಡೆ ತಡೆ. ಈ ಸುತ್ತುಮಾರ್ಗ ನವದೆಹಲಿಯಲ್ಲಿದೆ ಎಂದು ಹೇಳಲಾದರೂ, ತಾಂತ್ರಿಕವಾಗಿ ಇದು ಇರುವುದು ಉತ್ತರ ಪ್ರದೇಶ ರಾಜ್ಯದಲ್ಲಿ. ಎಫ್೧ ರಾಷ್ಟ್ರದ ಕ್ರೀಡೆಯಾಗದೆ, ರಂಜನೆ ಎಂದು ಪರಿಗಣಿಸಿ ಉತ್ತರ ಪ್ರದೇಶ ಸರ್ಕಾರ ಈ ಕ್ರೀಡಾಕೂಟದ ಮೇಲೆ ಹೆಚ್ಚುವರೆ ತೆರಿಗೆ ವಿಧಿಸಲು ನಿರ್ಧರಿಸಿತ್ತು.
"ಈ ರೇಸಿಂಗ್ ಕ್ರೀಡೆಯನ್ನು ಮತ್ತೆ ಭಾರತಕ್ಕೆ ತರಲು ತೀವ್ರ ಉತ್ಸುಕರಾಗಿದ್ದೇವೆ. ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದ್ದೇವೆ, ತೆರಿಗೆ ಸಂಬಂಧಿಸಿದಂತೆ ಕೆಲವು ತೊಂದರೆಗಳಿವೆ. ನಮ್ಮ ಕೈಲಿ ಏನೂ ಇಲ್ಲ. ನಮ್ಮ ಕಡೆಯಿಂದ ಏನು ಮಾಡಬಹುದೋ ಅವನ್ನೆಲ್ಲಾ ಮಾಡುತ್ತಿದ್ದೇವೆ" ಎನ್ನಿತ್ತಾರೆ ಜೆಪಿ ಸಂಸ್ಥೆಗಳ ಉಪಾಧ್ಯಕ್ಷ ಅಸ್ಕರಿ ಝೇದಿ.
ಸರ್ಕಾರದಿಂದ ಯಾವುದೇ ಧನಸಹಾಯ ಇಲ್ಲದಿರುವುದರಿಂದ, ಈ ಕ್ರೀಡೆಯ ಲೈಸೆನ್ಸ್ ಶುಲ್ಕವನ್ನು ಕಟ್ಟಲು ಜೆಪಿ ಸಂಸ್ಥೆಗೆ ಸುಲಭವಲ್ಲ. ಆದರೂ ಇನ್ನೂ ಮೂರು ರೇಸುಗಳು ನಮ್ಮ ಮುಂದಿದ್ದು, ೫ ವರ್ಷದ ಒಡಂಬಡಿಕೆಯನ್ನು ಪೂರೈಸುವಲ್ಲಿ ಸಫಲವಾಗುತ್ತೇವೆ ಎನ್ನುತ್ತಾರೆ.
"೨೦೧೫ ರಲ್ಲಿ ಸಾಧ್ಯವಿಲ್ಲ. ೨೦೧೬ ಕ್ಕೆ ಏನೂ ಹೇಳಲಾಗುವುದಿಲ್ಲ, ಆದರೆ ೨೦೧೭ ಕ್ಕೆ ಈ ರೇಸ್ ಕ್ರೆಡೆಯನ್ನು ಮತ್ತೆ ತರಲು ಪ್ರಯತ್ನಿಸುತ್ತೇವೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


