ಶ್ರೀಲಂಕಾಗೆ 405 ರನ್‌ಗಳ ಬೃಹತ್ ಸವಾಲು

ಕೊಲ್ಕತ್ತಾ: ಭಾರತ - ಶ್ರೀಲಂಕಾ ನಡುವೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ 404 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಕೊಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಬೃಹತ್ ಮೊತ್ತ ಕಲೆ ಹಾಕಿದೆ. ಭಾರತ ಪರ ಮುಂಬೈನ ರೋಹಿತ್ ಶರ್ಮಾ ವೈಯಕ್ತಿಕ 264 ರನ್‌ಗಳ ನೇರವಿನೊಂದಿಗೆ ಭಾರತ 404 ರನ್‌ಗಳನ್ನು ಗಳಿಸಿದ್ದು, ಶ್ರೀಲಂಕಾ ಗೆಲ್ಲಲು 405 ರನ್‌ಗಳ ಬೃಹತ್ ಸವಾಲು ನೀಡಿದೆ.
ಆರಂಭಿಕ ಆಟಗಾರ ಅಜಿಂಕ್ಯ ರಹಾನೆನೊಂದಿಗೆ ಕಣಕ್ಕೀಳಿದ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದರು. 173 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ತಮ್ಮ ಕ್ರಿಕೆಟ್ ಬದುಕಿನಲ್ಲಿ ವೈಯಕ್ತಿಕ 264 ರನ್‌ಗಳನ್ನು ಕಲೆ ಹಾಕಿ ದಾಖಲೆ ನಿರ್ಮಿಸಿದರು.
ಅಜಿಂಕ್ಯ ರಹಾನೆ 24 ಎಸೆತಗಳಲ್ಲಿ 28 ರನ್‌ಗಳಿಸಿ ಔಟಾದರು. ಬಳಿಕ ಬಂದ ಅಂಬಟ್ಟಿ ರಾಯುಡು ಕೇವಲ 8 ರನ್ ಗಳಿಸಿ ನಿರ್ಗಮಿಸಿದರು. ಇದರ ನಡುವೆಯೇ ರೋಹಿತ್ ಶರ್ಮಾ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದರು. ನಂತರ ಬಂದ ವಿರಾಟ್ ಕೊಹ್ಲಿ ನಾಯಕನ ಆಟ ಪ್ರದರ್ಶಿಸಿದರು.
ರೋಹಿತ್ ಶರ್ಮಾ ಜತೆಯಾದ ವಿರಾಟ್ ಕೊಹ್ಲಿ 66 ರನ್‌ಗಳನ್ನು ಗಳಿಸಿ ಔಟಾದರು. ಬಳಿಕ ಬಂದ ಸುರೇಶ್ ರೈನಾ ನಿರಾಸೆ ಮೂಡಿಸಿದರು. ಕೇವಲ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ರಾಬಿನ್ ಉತ್ತಪ್ಪ ರೋಹಿತ್‌ಗೆ ಸ್ಟ್ರೈಕ್ ಕೊಡುವ ಮೂಲಕ ದ್ವಿಶತಕಕ್ಕೆ ನೇರವಾದರು. ಉತ್ತಪ್ಪ ಅಜೇಯ 16 ರನ್ ಗಳಿಸಿದರು.
ಶ್ರೀಲಂಕಾ ಪರ ಮ್ಯಾಥ್ಯೂಸ್ 2 ವಿಕೆಟ್ ಪಡೆದರೆ, ಕುಲಶೇಖರ, ಶಮಿಂದಾ ತಲಾ 1 ವಿಕೆಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


