ಟೆಸ್ಟ್ ಕ್ರಿಕೆಟ್ ಪ್ರಮುಖ ಮಾದರಿಯಾಗಿ ಉಳಿಯಲಿದೆ: ಸಚಿನ್
ವಿಶ್ವ ಕ್ರಿಕೆಟ್‌ನಲ್ಲಿ ಏಕದಿನ ಹಾಗೂ ಟಿ-20...

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಏಕದಿನ ಹಾಗೂ ಟಿ-20 ಮಾದರಿಗಳ ಖ್ಯಾತಿಯ ಮಧ್ಯೆ ಟೆಸ್ಟ್ ಕ್ರಿಕೆಟ್ ಪ್ರಮುಖ ಮಾದರಿಯಾಗಿ ಉಳಿಯಲಿದೆ ಎಂದು ವಿಶ್ವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಸಚಿನ್, ಟೆಸ್ಟ್ ಕ್ರಿಕೆಟ್ ಈ ಕ್ರೀಡೆಗೆ ಅಡಿಪಾಯ ಇದ್ದಂತೆ. ಸೀಮಿತ ಓವರ್ ಮಾದರಿಗಳು ಎಷ್ಟೇ ಖ್ಯಾತಿ ಗಳಿಸಿದರೂ, ಟೆಸ್ಟ್ ಕ್ರಿಕೆಟ್ ಪ್ರಮುಖ ಮಾದರಿಯಾಗಿಯೇ ಉಳಿಯಲಿದೆ. 10 ಆಟಗಾರರ ಪೈಕಿ ಕನಿಷ್ಠ 8 ಆಟಗಾರರು ಟೆಸ್ಟ್ ಕ್ರಿಕೆಟ್ ಪ್ರಮುಖವಾದುದು ಎಂದು ಹೇಳುತ್ತಾರೆ. ಹಾಗಾಗಿ ಟೆಸ್ಟ್ ಕ್ರಿಕೆಟ್‌ಗೆ ಯಾವುದೇ ಆತಂಕವಿಲ್ಲ. ಅದು ತನ್ನ ಪ್ರಾಮುಖ್ಯತೆ ಉಳಿಸಕೊಳ್ಳಲಿದೆ ಎಂದು ಸಚಿನ್ ತಿಳಿಸಿದ್ದಾರೆ.
ಇನ್ನು 2008ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಗಳಿಸಿದ ಶತಕ ಅವಿಸ್ಮರಣೀಯ ಎಂದು ಅವರು ಹೇಳಿದ್ದಾರೆ. 2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿಯ ನಂತರ ಇಡೀ ದೇಶ ಕಂಗಾಲಾಗಿತ್ತು. ಈ ವೇಳೆ ಜನ ಆ ಆಘಾತದಿಂದ ಹೊರಬಂದು ಬೇರೆ ವಿಷಯದ ಬಗ್ಗೆ ಯೋಚಿಸುವಂತೆ ಮಾಡಲು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನೆರವಾಯಿತು. ಹಾಗಾಗಿ ಈ ಟೆಸ್ಟ್‌ನಲ್ಲಿ ಗಳಿಸಿದ ಶತಕ ಬಹಳ ವಿಶೇಷವಾದುದು ಎಂದು ಸಚಿನ್ ತಿಳಿಸಿದರು.
ಪ್ರಕಾಶಕರ ಸ್ಪರ್ಧೆ: ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆ ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕ ಎಲ್ಲೆಡೆ ಹೊಸ ಸಂಚಲನ ಸೃಷ್ಟಿಸಿದೆ. ಕನ್ನಡ ಸೇರಿದಂತೆ ಹಲವಾರು ಪ್ರಾಂತೀಯ ಭಾಷೆಗಳಿಗೆ ಈ ಪುಸ್ತಕವನ್ನು ಅನುವಾದ ಮಾಡಲು ಹಲವಾರು ಪ್ರಕಾಶಕರು ಮುಂದೆ ಬಂದಿದ್ದು, ಇದಕ್ಕಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಪ್ಲೇಯಿಂಗ್ ಇನ್ ಮೈ ವೇ ಪ್ರಕಟಿಸಿದ್ದ ಹ್ಯಾಚೆಟ್ ಇಂಡಿಯಾ ಮಾಲೀಕರಾದ ಪೌಲಮಿ ಚಟರ್ಜಿ ಈ ವಿಚಾರ ತಿಳಿಸಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


