ಅಪ್ರಾಪ್ತೆಗೆ ಗರ್ಭ ಪರೀಕ್ಷೆ ವರದಿ ನಿರಾಕರಿಸಿದ ಸಾಯ್
ಅಪ್ರಾಪ್ತ ಬಾಕ್ಸಿಂಗ್ ಆಟಗಾರ್ತಿಗೆ ಗರ್ಭ...

ನವದೆಹಲಿ: ಅಪ್ರಾಪ್ತ ಬಾಕ್ಸಿಂಗ್ ಆಟಗಾರ್ತಿಗೆ ಗರ್ಭ ಪರೀಕ್ಷೆ ಮಾಡಿಸಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಿರಸ್ಕರಿಸಿದೆ.
ಈ ವಾರದ ಆರಂಭದಲ್ಲಿ ಬಾಕ್ಸಿಂಗ್ ಇಂಡಿಯಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಪ್ರತಿ ಮಹಿಳಾ ಬಾಕ್ಸರ್ ಅನ್ನು ಗರ್ಭ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ ಅಪ್ರಾಪ್ತ ಆಟಗಾರ್ತಿಯರು ಇದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಶುಕ್ರವಾರ ಈ ಕುರಿತು ಸ್ಪಷ್ಟನೆ ನೀಡಿರುವ ಭಾರತೀಯ ಕ್ರೀಡಾ ಪ್ರಾಧಿಕಾರ, ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗೆ ತೆರಳಲಿರುವ ಭಾರತ ತಂಡದಲ್ಲಿ ಯಾವುದೇ ಅಪ್ರಾಪ್ತ ಬಾಕ್ಸರ್‌ಗಳಿಲ್ಲ. ಯಾವ ಬಾಕ್ಸರ್‌ಗಳೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಲ್ಲ ಹಾಗಾಗಿ ಈ ವರದಿ ಆಧಾರ ರಹಿತವಾದುದು ಎಂದು ತಿಳಿಸಿದೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸ್ಪರ್ಧಿಗಳಿಗೆ ಕನಿಷ್ಠ 19 ವರ್ಷವಾಗಿರಬೇಕು. ಭಾರತ ತಂಡದಲ್ಲಿರುವ ಅತ್ಯಂತ ಕಿರಿಯ ಬಾಕ್ಸರ್ 1994ರಲ್ಲಿ ಜನಿಸಿದ್ದಾರೆ. ಹಾಗಾಗಿ ಇಲ್ಲಿ ಅಪ್ರಾಪ್ತರಿಗೆ ಗರ್ಭ ಪರೀಕ್ಷೆ ಮಾಡಿರುವ ಪ್ರಶ್ನೆಯೇ ಬರುವುದಿಲ್ಲ.
ವಿಶ್ವ ಬಾಕ್ಸಿಂಗ್ ಸಂಸ್ಥೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸ್ಪರ್ಧಿಗಳು ಅದಿಕೃತ ವೈದ್ಯರಿಂದ ಗರ್ಭ ಪರೀಕ್ಷೆ ಮಾಡಿಸಿರುವ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದೆ. ಹಾಗಾಗಿ ಬಾಕ್ಸಿಂಗ್ ಇಂಡಿಯಾ ಕ್ರೀಡಾಪಟುಗಳು ಹಾಗೂ ಕೋಚ್ ಮನವಿ ಮೇರೆಗೆ ಭಾರತೀಯ ಕ್ರೀಡಾ ಪ್ರಾಧಿಕಾರದ ವೈದ್ಯರಿಂದ ಪರೀಕ್ಷೆ ಮಾಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


